HomeSports Newsರಿಂಕು ಸಿಂಗ್ ಎಂಗೇಜ್ಮೆಂಟ್: ಉಂಗುರ ತೊಡಿಸುತ್ತಿದ್ದಂತೆ ಭಾವುಕರಾದ ಪ್ರಿಯಾ ಸರೋಜ್!

ರಿಂಕು ಸಿಂಗ್ ಎಂಗೇಜ್ಮೆಂಟ್: ಉಂಗುರ ತೊಡಿಸುತ್ತಿದ್ದಂತೆ ಭಾವುಕರಾದ ಪ್ರಿಯಾ ಸರೋಜ್!

For Dai;y Updates Join Our whatsapp Group

Spread the love

ಲಕ್ನೋ:– ಇಲ್ಲಿನ ಪಂಚತಾರಾ ಹೋಟೆಲ್ ದಿ ಸೆಂಟ್ರಮ್‌ನಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಮತ್ತು ಜೌನ್‌ಪುರದ ಮಚ್ಲಿಶಹರ್‌ನ ಎಸ್‌ಪಿ ಸಂಸದೆ ಪ್ರಿಯಾ ಸರೋಜ್ ಅವರ ನಿಶ್ಚಿತಾರ್ಥ ಬಹಳ ಅದ್ದೂರಿಯಾಗಿ ನೆರವೇರಿದೆ. ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡರು. ರಿಂಕು ಸಿಂಗ್, ಪ್ರಿಯಾ ಸರೋಜ್ ಅವರ ಬೆರಳಿಗೆ ಉಂಗುರ ತೊಡಿಸುತ್ತಿದ್ದಂತೆ, ಪ್ರಿಯಾ ಅವರು ಭಾವುಕರಾದರು. ಕೂಡಲೇ ರಿಂಕು ಸಿಂಗ್ ಅವರನ್ನು ಸಮಾಧಾನಪಡಿಸಿದರು.

ನಿಶ್ಚಿತಾರ್ಥ ಸಮಾರಂಭಕ್ಕೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಜಯಾ ಬಚ್ಚನ್, ಟೀಂ ಇಂಡಿಯಾದ ಮಾಜಿ ಆಟಗಾರರಾದ ಪ್ರವೀಣ್ ಕುಮಾರ್ ಮತ್ತು ಪಿಯೂಷ್ ಚಾವ್ಲಾ ಅವರಲ್ಲದೆ, ಯುಪಿ ರಣಜಿ ತಂಡದ ನಾಯಕ ಆರ್ಯನ್ ಜುಯಾಲ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು. ರಿಂಕು ಸಿಂಗ್ ಬಿಳಿ ಶೇರ್ವಾನಿ ಧರಿಸಿದ್ದರೆ, ಪ್ರಿಯಾ ಸರೋಜ್ ಗುಲಾಬಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡರು. ವೇದಿಕೆ ಮೇಲೇರಿದ ತಕ್ಷಣ, ಪ್ರಿಯಾ ಭಾವುಕರಾದರು. ಅವರ ಕಣ್ಣುಗಳಿಂದ ನೀರು ಬಂತು, ಇದನ್ನು ಗಮನಿಸಿದ ರಿಂಕು ಸಿಂಗ್ ಅವರನ್ನು ಸಮಾಧಾನ ಪಡಿಸಿದರು. ಇದಾದ ನಂತರ, ಇಬ್ಬರೂ ನಗುತ್ತಾ ಪೋಸ್ ನೀಡಲು ಪ್ರಾರಂಭಿಸಿದರು. ಈ ಸಮಾರಂಭಕ್ಕೆ ಸುಮಾರು 300 ಅತಿಥಿಗಳು ಆಗಮಿಸಿದ್ದರು ಎನ್ನಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!