ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಯಶ್ ನಟನೆಯ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿದ್ದಾರೆ. ಚಿತ್ರದ ಟಾಕ್ಸಿಕ್ ಸಿನಿಮಾದ ಕುರಿತು ಅಪ್ಡೇಟ್ ಕೊಡ್ತೀವಿ ಅನ್ನೋ ಸುದ್ದಿ ಹೊರಗೆ ಬರ್ತಾ ಇದ್ದಂತೇನೆ, ರಿಷಬ್ ಶೆಟ್ಟಿ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ನಾನು ಕೂಡ ಈ ಒಂದು ಚಿತ್ರಕ್ಕಾಗಿಯೇ Waiting ಅನ್ನೋದನ್ನ ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ. ಈ ಮೂಲಕ ಬೇರೆ ಸ್ಟಾರ್ಗಳ ಚಿತ್ರಕ್ಕಾಗಿ ತಾವೂ ಕಾಯುತ್ತೇವೆ ಅನ್ನೋದನ್ನ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.
ಯಶ್ ನಟನೆಯ ಟಾಕ್ಸಿಕ್ ಬಹು ನಿರೀಕ್ಷಿತ ಚಿತ್ರವಾಗಿದ್ದು ಈ ಚಿತ್ರದ ಅಪ್‌ಡೇಟ್‌ಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಈ ಸಾಲಿನಲ್ಲಿ ರಿಷಬ್ ಶೆಟ್ರು ಕೂಡ ಇದ್ದಾರೆ. ಒಬ್ಬ ಸಾಮಾನ್ಯ ಸಿನಿಮಾ ಪ್ರೇಮಿಯಂತೆ ರಿಷಬ್ ಶೆಟ್ಟಿ ಕೂಡ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿದ್ದಾರೆ.
ಟಾಕ್ಸಿಕ್ ಚಿತ್ರದ ಹೊಸ ಅಪ್‌ಡೇಟ್ ಕೊಡುತ್ತೇವೆ. ಅದನ್ನ ಜನವರಿ 8 ರಂದು ಬೆಳಗ್ಗೇನೆ ಕೊಡುತ್ತೇವೆ. ಹೀಗೊಂದು ಪೋಸ್ಟ್ ಅನ್ನ ಕೆವಿಎನ್ ಸಂಸ್ಥೆ ಮತ್ತು ಯಶ್ ಹಾಕಿದ್ದೇ ತಡ, ರಿಷಬ್ ಶೆಟ್ಟಿ ಅದಕ್ಕೆ ರಿಯಾಕ್ಟ್ ಮಾಡಿದ್ದಾರೆ. ಟ್ವಿಟರ್ ಖಾತೆಯ ಯಶ್ ಪೋಸ್ಟ್‌ಗೇನೆ ರಿಷಬ್ ಟ್ಯಾಗ್ ಮಾಡಿದ್ದಾರೆ. ಟ್ಯಾಗ್ ಮಾಡಿ ವೇಟಿಂಗ್ ಅಂತಲೇ ಹೇಳಿದ್ದಾರೆ.