ಬಂಗಾರಪೇಟೆ: ರಸ್ತೆ ಅಪಘಾತದಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ವೈದ್ಯ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕುಪ್ಪನಹಳ್ಳಿ ಬಳಿ ಜರುಗಿದೆ.
Advertisement
40 ವರ್ಷದ ವೈದ್ಯ ಕೃಷ್ಣ ಜಗನ್ ಸ್ಥಳದಲ್ಲಿ ಮೃತಪಟ್ಟ ವೈದ್ಯ. ಇವರು ಅನಂತಪುರದಿಂದ ಕುಪ್ಪಂ ಪಿಇಎಸ್ ಕಾಲೇಜಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಅಪಘಾತಕ್ಕೆ ಅತೀ ವೇಗವೇ ಕಾರಣವೆಂದು ಮೇಲೋಟ್ನಕ್ಕೆ ಕಂಡು ಬಂದಿದೆ.
ರಸ್ತೆ ಆರಂಭವಾಗುವ ಮುನ್ನವೇ ಬೆಂಗಳೂರು-ಚೆನೈ ಕಾರಿಡಾರ್ ರಸ್ತೆಯಲ್ಲಿ ಅಪಘಾತ ಸಂಖ್ಯೆಗಳು ಹೆಚ್ಚಾಗಿ ಹಲವಾರು ಮಂದಿ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.