ಕಲಬುರಗಿ:- ಅಫಜಲಪುರ ಮುಖ್ಯರಸ್ತೆ ಗೊಬ್ಬೂರ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
ಕಲಬುರಗಿ ನಗರದ ಮಿಲ್ಲತ್ ನಗರ ಬಡಾವಣೆ ನಿವಾಸಿಗಳಾದ 70 ವರ್ಷದ ಆಯೇಷಾ, 30 ವರ್ಷದ ಅಜ್ಮೆರಾ, 2 ವರ್ಷದ ಜೈನಬ್ ಮೃತ ದುರ್ದೈವಿಗಳು. ಇಂದು ಬೆಳಿಗ್ಗೆ ಕಾರಿನಲ್ಲಿ ಒಂದೇ ಕುಟುಂಬದ 8 ಜನ ಸೇರಿದಂತೆ 5 ಜನ ಮಕ್ಕಳು ಸಂಬಂಧಿಕರ ಮಗುವಿನ ಜವಳ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು.
ಇದೇ ವೇಳೆ ಗೊಬ್ಬೂರ ಗ್ರಾಮದ ಬಳಿ ಕಾರಿಗೆ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ರಸ್ತೆ ಬದಿಯ ತಡೆ ಕಂಬಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ 6 ಕಂಬಗಳು ಹಾಗೂ ಕಾರು ಸಂಪೂರ್ಣ ನಜ್ಜು ಗುಜ್ಜಾಗಿ ಹೋಗಿದೆ. ಅಲ್ಲದೇ ಸ್ಥಳದಲ್ಲಿ 3 ಮಂದಿ ಸಾವನ್ನಪ್ಪಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿವೆ.
ಗಾನಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.