ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಜಿ.ಎಸ್. ಪಾಟೀಲ ನೇತೃತ್ವದಲ್ಲಿ ರೋಡ್ ಶೋ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರವಾಗಿ ಕಾರ್ಯಕರ್ತರು ಪಟ್ಟಣದಲ್ಲಿ ಮತಯಾಚನೆ ಮಾಡಿದರು.
ಪಟ್ಟಣದ ಮೈಸೂರ ಮಠದಿಂದ ಅಗಸಿಬಾಗಿಲು ಮೂಲಕ ಹಿರೇಬಜಾರ, ಕಟ್ಟಿಬಸವೇಶ್ವರ ರಂಗಮಂದಿರ ಕೊಳ್ಳಿಯವರ ಕತ್ರಿ, ಭಜರಂಗ ವೃತ್ತ, ದುರ್ಗಾ ಸರ್ಕಲ್‌ನಲ್ಲಿ ಸಭೆಯಾಗಿ ಮಾರ್ಪಟ್ಟಿತ್ತು. ರೋಡ್ ಶೋ ಉದ್ದಕ್ಕೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಶಾಸಕ ಜಿ.ಎಸ್. ಪಾಟೀಲ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದರು.
ಇದಕ್ಕೂ ಮುನ್ನ ರೋಡ್ ಶೋ ಸಂಚರಿಸುವ ಮಾರ್ಗದ ಕೆಲ ವೃತ್ತಗಳಲ್ಲಿ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ಜನವಿರೋಧಿ ಹಾಗೂ ರೈತವಿರೋಧಿ ನೀತಿಗಳು, ಬೆಲೆ ಏರಿಕೆಯನ್ನು ಖಂಡಿಸಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನೀಡಿದ ಉದ್ಯೋಗ ಸೃಷ್ಟಿ, ಸ್ಮಾರ್ಟ್ ಸಿಟಿ ನಿರ್ಮಾಣ, ಕಪ್ಪು ಹಣ ವಾಪಸ್ ತರುವುದಾಗಿ ದೊಡ್ಡ ಭಾಷಣಗಳನ್ನು ಮಾಡಿ, ಇಂದು ಭ್ರಷ್ಟಾರಿಗಳನ್ನು ಜೈಲಿನಲ್ಲಿ ಹಾಕುತ್ತೇವೆ ಎಂದು ಹೇಳಿದ ಮೋದಿ ಹಾಗೂ ಶಾ ಅವರು ಭ್ರಷ್ಟಾಚಾರ ಆರೋಪ ಹೊತ್ತ ಸಾಲು, ಸಾಲು ನಾಯಕರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು.
ಶಾಸಕ ಜಿ.ಎಸ್. ಪಾಟೀಲ, ಮುಖಂಡರಾದ ಶಿವರಾಜ ಘೋರ್ಪಡೆ, ಸಿದ್ದಪ್ಪ ಬಂಡಿ, ಎಚ್.ಎಸ್. ಸೋಂಪುರ, ರಫೀಕ್ ತೋರಗಲ್, ಪ್ರಶಾಂತ ರಾಠೋಡ, ಚಂಬಣ್ಣ ಚವಡಿ, ಎ.ಡಿ. ಕೋಲಕಾರ, ಶಶಿಧರ ಹೂಗಾರ, ಬಿ.ಎಸ್. ಶೀಲವಂತರ, ಶರಣಪ್ಪ ಚಳಗೇರಿ, ಯಲ್ಲಪ್ಪ ಬಂಕದ, ಮುತ್ತಣ್ಣ ಮ್ಯಾಗೇರಿ, ಶ್ರೀಧರ ಬಿದರಳ್ಳಿ, ಶ್ರೀಧರ ಗಂಜಿಗೌಡರ, ಇಮಾಮಸಾಬ ಬಾಗವಾನ, ಶಶಿಧರ ವಕ್ಕಲರ, ಸಿದ್ದು ಗೊಂಗಡಶೆಟ್ಟಿಮಠ, ತುಳಸಪ್ಪ ಸುಳ್ಳದ ಸೇರಿ ಹಲವು ಮುಖಂಡರಿದ್ದರು.