ದರೋಡೆ ಪ್ರಕರಣದ ಆರೋಪ ಸಾಬೀತು: ಅಪರಾಧಿಗಳಿಗೆ 10 ವರ್ಷ ಜೈಲು ಶಿಕ್ಷೆ, ತಲಾ 1 ಲಕ್ಷ ದಂಡ!

0
Spread the love

ರಾಯಚೂರು:- ಬರೋಬ್ಬರಿ ಮೂರು ವರ್ಷಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣ ಸಾಬೀತಾದ ಹಿನ್ನೆಲೆ ಅಪರಾಧಿಗಳಿಗೆ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.

Advertisement

ಶಿಕ್ಷೆಗೆ ಒಳಗಾದ ಅಪರಾಧಿಗಳನ್ನು ತೋಟಾ ರಾಮಕೃಷ್ಣಂ ರಾಜು, ಸದ್ದಲ ಕುಮಾರ ರಾಜ್, ಅರ್ಧಾಣಿ ಲಕ್ಷಣ ಮತ್ತು ಸುಜಾತ ಎಂದು ಗುರುತಿಸಲಾಗಿದೆ. ಇವರು ಆಂಧ್ರ ಮೂಲದವರು ಎಂದು ತಿಳಿದು ಬಂದಿದೆ. ಎಸ್, 2022ರ ನವೆಂಬರ್ 8ರಂದು ಸಿಂಧನೂರಿನ ತುರುವಿಹಾಳ ಠಾಣೆ ವ್ಯಾಪ್ತಿಯಲ್ಲಿ ಮಾರಕಾಸ್ತ್ರಗಳಿಂದ ಬೆದರಿಸಿ ಆರೋಪಿಗಳು ಮನೆ ದರೋಡೆ ಮಾಡಿದರು. ಸಿಂಧನೂರಿನ ತುರುವಿಹಾಳ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ತುರುವಿಹಾಳ ಠಾಣೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದರು.

ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗಳಿಗೆ ರಾಯಚೂರಿನ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ 1 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.

ಘಟನೆ ವಿವರ:

2022ರ ನವೆಂಬರ್ 8 ರಂದು ಬೆಳಗಿನ ಜಾವ ಆರೋಪಿತರು, ಗಾಂಧಿ ನಗರದ ಬಾಸ್ಕರಾವ್‌ ಅವರ ಮನೆಗೆ ನುಗ್ಗಿ 218 ಗ್ರಾಂ ಬಂಗಾರ ಕದ್ದು ಎಸ್ಕೇಪ್ ಆಗಿದ್ದರು. ಈ ಸಂಬಂಧ PSI ಚಂದ್ರಪ್ಪ, ಸಿಪಿಐ ರವಿಕುಮಾರ್ ಕಪ್ಪತನವರ್ ಅವರನ್ನೊಳಗೊಂಡ ತನಿಖಾ ತಂಡವು ಆರೋಪಿಗಳನ್ನು ಬಂಧಿಸಿ, ಬಳಿಕ ಅವರ ವಿಚಾರಣೆ ಪೂರ್ಣ ಮಾಡಿ ಆರೋಪಿತರ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಅದರಂತೆ ಕೋರ್ಟ್ ಇದೀಗ ಆರೋಪಿಗಳಿಗೆ ಶಿಕ್ಷೆ ಪ್ರಕಟ ಮಾಡಿದೆ.


Spread the love

LEAVE A REPLY

Please enter your comment!
Please enter your name here