ಬೆಂಗಳೂರು:- ನಗರದ ಡೈರಿ ಸರ್ಕಲ್ ನಲ್ಲಿ ಹಾಡಹಗಲೇ ನಡೆದಿದ್ದ 7 ಕೋಟಿ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಟ್ಟು 8 ಜನರ ಗುಂಪಿನಿಂದ ಕೃತ್ಯ ನಡೆದಿದೆ. ಈಗ ಸದ್ಯ 3 ಆರೋಪಿಗಳನ್ನು ಬಂಧಿಸಲಾಗಿದೆ. 5.76 ಕೋಟಿ ಹಣ ಸೀಜ್ ಮಾಡಲಾಗಿದೆ. ಮೊದಲು ಡಿಜೆ ಹಳ್ಳಿಯಲ್ಲಿ ಆಗಿದೆ ಅಂತ ಮಾಹಿತಿ ಬಂದಿತ್ತು. ಘಟನೆ ನಡೆದ ಒಂದೂವರೆ ಗಂಟೆಯ ಬಳಿಕ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎಲ್ಲಾ ಭಾಗಗಳಲ್ಲಿ ನಾಕಾಬಂಧಿ ಹಾಕಲಾಗಿತ್ತು. ದರೋಡೆಕೋರರು ಮೊಬೈಲ್ ಬಳಸುತ್ತಿರಲಿಲ್ಲ. ಸಿಸಿಟಿವಿ ಕಾಣದ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿದ್ದರು. ತನಿಖೆಯ ದಾರಿ ತಪ್ಪಿಸಲು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಿದ್ದಾರೆ.
ಘಟನೆ ನಡೆದ ದಿನ ಹಣ ತೆಗೆದುಕೊಂಡು ಹೋದ ವಾಹನ ಹಿಡಿಯಲಿಕ್ಕೆ ಆಗ್ಲಿಲ್ಲ. ಅನೇಕ ವಾಹನ ಬಳಸಿದ್ದಾರೆ. ವಾಹನಗಳ ನಂಬರ್ ಪದೇ ಪದೇ ಬದಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸಿಸಿಟಿವಿ ಇಲ್ಲದ ಕಡೆಯಲ್ಲಿ ಆರೋಪಿಗಳು ಓಡಾಡಿದ್ದಾರೆ. ವಾಹನವನ್ನು ಸಿಸಿಟಿವಿ ಇಲ್ಲದ ಜಾಗದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಗೋವಾದಲ್ಲಿ ಆರೋಪಿಗಳನ್ನು ಹುಡುಕಾಟ ನಡೆಸಿದ್ದಾರೆ. ಇನ್ನೂ ಹಣ ರಿಕವರಿ ಆಗಬೇಕು. 200 ಸ್ಟಾಪ್ ಬಳಕೆ ಮಾಡಲಾಗಿದೆ. 30 ಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆ ಮಾಡಲಾಗಿದೆ. ಅದರಲ್ಲಿ ಮೂವರು ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ.
ಗೋವಿಂದಪುರ ಪೇದೆ ಸೇರಿ ಮೂವರ ಬಂಧನವಾಗಿದೆ. ಗೋಪಿ, ಜೋವಿಯಾರ್, ಅಣ್ಣಪ್ಪನಾಯ್ಕ್ ಬಂಧಿತ ಆರೋಪಿಗಳು. ಕ್ಲೂ ಇಲ್ಲದೆ ಆರೋಪಿಗಳು ಕೆಲಸ ಮಾಡಿದ್ದಾರೆ. ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದು ಬಂಧನ ಮಾಡಲಾಗಿದೆ. 6 ರಿಂದ ಏಂಟು ಮಂದಿ ಸೇರಿ ಕೃತ್ಯ ಎಸಗಿದ್ದಾರೆ. ಒಂದು ಇನ್ನೋವಾ ಗಾಡಿ ಚಿತ್ತೂರಿನಲ್ಲಿ ಸಿಕ್ಕಿತ್ತು. ಬೆಂಗಳೂರಿನ ಹೊರ ಭಾಗದಲ್ಲಿ ಹಣ ರಿಕವರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


