ರಾಕಿಂಗ್ ಸ್ಟಾರ್ ಯಶ್ ಸದ್ಯ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಆರಂಭವಾಗಲಿದ್ದು ಅದಕ್ಕೂ ಮುನ್ನ ಉಜ್ಜಯಿನಿಯ ಶ್ರೀಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಉಜ್ಜಯಿನಿಯ ಶ್ರೀಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಯಶ್ ಸಾಕಷ್ಟು ಹೊತ್ತು ಶಿವನ ಧ್ಯಾನ ಮಾಡಿದ್ದಾರೆ. ಶಿವನ ಧ್ಯಾನ ಮಾಡಿದಾಗ ತಮಗಾದ ಅನುಭವವನ್ನು ಯಶ್ ಹೇಳಿದ್ದಾರೆ. ಶಿವ ತಮ್ಮ ಜೀವನದಲ್ಲಿ ಎಷ್ಟು ಮುಖ್ಯವಾಗಿದ್ದಾನೆ. ಬಾಲ್ಯದಿಂದಲೂ ಯಾಕೆ ಶಿವ ಇಷ್ಟ ಅನ್ನೋ ಅರ್ಥದ ಸುಮಾರು ವಿಚಾರವನ್ನೂ ಹೇಳಿಕೊಂಡಿದ್ದಾರೆ. ಶಿವ ತಮ್ಮ ಮನೆಗೂ ಅದೆಷ್ಟು ಮಹತ್ವದ ದೇವರು ಅನ್ನೋದನ್ನು ಯಶ್ ತಿಳಿಸಿದ್ದಾರೆ.
ನಾಳೆಯಿಂದ ರಾಮಾಯಾಣ 2 ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದೆ. ಹೀಗಾಗಿ ಶೂಟಿಂಗ್ ಆರಂಭಕ್ಕೂ ಪ್ರಾರಂಭಿಸುವ ಮೊದಲು ನಟ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗಿ ವಿಶೇಷವಾಗಿ ಪೂಜೆ ಸಲ್ಲಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ನಾನು ಚಿಕ್ಕಂದಿನಿಂದಲೂ ಶಿವನ ಭಕ್ತನೇ ಆಗಿದ್ದೇನೆ. ನನಗೆ ಶಿವ ಅಂದ್ರೆ ತುಂಬಾನೆ ಇಷ್ಟ ಆಗುತ್ತಾರೆ. ಇದಕ್ಕೂ ಹೆಚ್ಚಾಗಿ ನಮ್ಮ ಮನೆ ದೇವ್ರು ಇಲ್ವೇ ಕುಲದೇವ್ರು ಬೇರೆ ಯಾರೋ ಅಲ್ಲ. ಅದು ಶಿವನೇ ಆಗಿದ್ದಾನೆ. ನನಗೆ ಶಿವ ತುಂಬಾನೆ ಇಷ್ಟ ಅಂತಲೇ ಯಶ್ ಹೇಳಿಕೊಂಡಿದ್ದಾರೆ.
ಶಿವ ಧ್ಯಾನ ಮಾಡಿದ್ಮೇಲೆ ವಿಶೇಷ ಅನುಭವ ಆಗಿದೆ. ಶಿವನ ಧ್ಯಾನ ಮಾಡುವಾಗ ನನಗೆ ಸಮಯ ಹೋಗಿದ್ದೇ ಗೊತ್ತಾಗಿಲ್ಲ ಅಂತ ಯಶ್ ಹೇಳಿದ್ದಾರೆ.