ರೋಣ ಪೊಲೀಸರ ಭರ್ಜರಿ ಕಾರ್ಯಾಚರಣೆ: ನಂಬರ್ ಪ್ಲೇಟ್ ಇಲ್ಲದ ಬೈಕ್ʼಗಳು ಸೀಜ್‌

0
Spread the love

ಗದಗ: ಬೆಳ್ಳಂಬೆಳಗ್ಗೆ ಬೈಕ್ ಸವಾರರಿಗೆ ರೋಣ ಪೊಲೀಸರು ಶಾಕ್ ನೀಡಿದ್ದಾರೆ. ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಪೊಲೀಸರು ಕಾರ್ಯಾಚರಣೆ ಮೂಲಕ ನಂಬರ್ ಪ್ಲೇಟ್ ಇಲ್ಲದ ಬೈಕ್ ಗಳನ್ನು ಸೀಜ್‌ ಮಾಡಿದ್ದಾರೆ. ಸಿಸಿಟಿವಿ ಕಣ್ಗಾವಲು ಕಣ್ಣು ತಪ್ಪಿಸಿದ ಅಡ್ಡಾದಿಡ್ಡಿ ಅಡ್ಡಾಡುತ್ತಿದ್ದ ನೂರಾರು ಬೈಕ್ ಸೀಜ್‌ ಮಾಡಿದ್ದಾರೆ. ‌

Advertisement

ನಂಬರ್ ಪ್ಲೇಟ್ ಇಲ್ಲದ ಹಾಗೂ ನಂಬರ್ ಇಲ್ಲದ ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಿ ದಂಡ ಹಾಕಿದ್ದಾರೆ. ರೋಣ ಪಿಎಸ್ಐ ಪ್ರಕಾಶ್ ಬಣಕಾರ ನೇತೃತ್ವದಲ್ಲಿ ಸೀಜ್‌ ಮಾಡಲಾಗಿದ್ದು, ಇಂದು 500 ದಂಡ ಕಟ್ಟಿ. ನಾಳೆಯಿಂದ ಕಡ್ಡಾಯವಾಗಿ ನಂಬರ್ ಹಾಕಿಸಿ, ಇಲ್ಲಾಂದ್ರೆ ಬೈಕ್ ಸೀಜ್ ಮಾಡ್ತೀವಿ ಕೋರ್ಟ್ ಗೆ ಹೋಗಿ ದಂಡಕಟ್ಟಿ ಅಂತ ಎಂದು ರೋಣ ಪಿಎಸ್ಐ ಪ್ರಕಾಶ್ ಬಣಕಾರ ಎಚ್ಚರಿಕೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here