ರೋಣ| ಒಂದೇ ರಾತ್ರಿ ಆರು ಮನೆಗಳಿಗೆ ಕನ್ನ: ಬೆಚ್ಚಿದ ಸಾರ್ವಜನಿಕರು!

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದಲ್ಲಿ ಇತ್ತೀಚೆಗೆ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗುರುವಾರ ರಾತ್ರಿ ಒಂದೇ ದಿನ 6 ಮನೆಗಳ ಕಳ್ಳತನ ನಡೆದಿರುವುದು ನಗರದ ಜನರಲ್ಲಿ ಭೀತಿ ಮೂಡಿಸಿದೆ.

Advertisement

ಪಟ್ಟಣದ ಮುಗುಳಿ ರಸ್ತೆಗೆ ಹೊಂದಿಕೊಂಡಿರುವ ಕಾಲೋನಿಯಲ್ಲಿ ಸರಣಿ ಕಳ್ಳತನ ನಡೆದಿದೆ. ಕಳೆದ 3-4 ತಿಂಗಳುಗಳ ಹಿಂದೆ ಪಟ್ಟಣದಲ್ಲಿ ಇದೇ ರೀತಿ ಸರಣಿ ಕಳ್ಳತನ ನಡೆದಿತ್ತು. ಇದೀಗ ಮತ್ತೆ 6 ಮನೆಗಳಿಗೆ ನುಗ್ಗಿದ ಮುಸುಕುಧಾರಿ ಕಳ್ಳರು 4 ಮನೆಗಳಲ್ಲಿ ಹಣ, ಬೆಳ್ಳಿ-ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಅಮಿನಸಾಬ ಜಾಲಿಹಾಳ, ವ್ಹಿ.ಎ. ಗಡಗಿ ಎಂಬುವರ ಮನೆಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಕಳುವಿನ ಯತ್ನ ನಡೆದಿದೆಯಾದರೂ, ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ.

ಗುರುವಾರ ಮಧ್ಯ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ವ್ಹಿ.ಡಿ. ನವಲಗುಂದ ಎನ್ನುವರ ಮನೆಯಲ್ಲಿ 70 ಸಾವಿರ ರೂ ಮೌಲ್ಯದ ಬೆಳ್ಳಿ ಸಾಮಾಗ್ರಿಗಳು, ಜಾನಪ್ಪ ಹಾವನಗೌಡ್ರ ಎಂಬುವರ ಮನೆಯಲ್ಲಿ 40 ಸಾವಿರ ರೂ ನಗದು, ತನ್ವೀರ ಚಿನ್ನೂರ ಎಂಬುವರ ಮನೆಯಲ್ಲಿ 70 ಸಾವಿರ ರೂ ನಗದು ಹಾಗೂ ತೊಲೆ ಒಡವೆಗಳನ್ನು ದೋಚಿದ್ದಾರೆ. ಬಾಡಿಗೆ ಮನೆಯೊಂದರಲ್ಲಿ ಕರ‍್ಯ ನರ‍್ವಹಿಸುತ್ತಿದ್ದ ಅಂಗನವಾಡಿ ಕೇಂದ್ರವನ್ನೂ ಕಳ್ಳರು ಮನೆಯಂದು ತಿಳಿದು ಕಳ್ಳತನಕ್ಕೆ ಪ್ರಯತ್ನಪಟ್ಟಿದ್ದಾರೆ.

ಕಳ್ಳತನವಾಗಿರುವ ಮನೆಗಳ ಮಾಲಿಕರು ಮನೆಗಳಿಗೆ ಬೀಗ ಹಾಕಿ ಬೇರೆ ಕಡೆಗೆ ಹೋಗಿರುವುದನ್ನು ತಿಳಿದು ಅದೇ ಮನೆಗಳಿಗೆ ಕನ್ನ ಹಾಕಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಗುರುವಾರ ಮಧ್ಯಾಹ್ನ ಅಪರಿಚಿತ ಮಹಿಳೆಯೊಬ್ಬಳು ಮನೆಗೆಲಸ ಇದೆಯಾ ಎಂದು ಕೇಳಿಕೊಂಡು ಹೋಗಿದ್ದಾಳೆ ಎನ್ನಲಾಗಿದ್ದು, ರೋಣದಲ್ಲಿ ಕಳ್ಳರ ತಂಡವೇ ಬೀಡುಬಿಟ್ಟಿರುವ ಸಂಶಯ ಮೂಡಿಸಿದೆ.

ಸರಣಿ ಕಳ್ಳತನ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶ್ವಾನ ದಳದೊಂದಿಗೆ ಪರಿಶೀಲನೆ ನಡೆಸಿದರು. ಪೊಲೀಸ್ ಪಡೆ ಕಳ್ಳತನವಾಗಿರುವ ಪ್ರತಿ ಮನೆಗಳಿಗೆ ತೆರಳಿ ಕಳ್ಳತನವಾಗಿರುವ ವಸ್ತುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಡಿವಾಯ್‌ಎಸ್ಪಿ ಪ್ರಭುಗೌಡ ಕಿರೇದಹಳ್ಳಿ, ಸಿಪಿಐ ಎಸ್.ಎಸ್. ಬಿಳಗಿ, ಪಿಎಸ್‌ಐ ಪ್ರಕಾಶ ಬಣಕಾರ, ಐಶ್ರ‍್ಯ ನಾಗರಾಳ, ಪ್ರಕಾಶ ಸೇರಿದಂತೆ ಸಿಬ್ಬಂದಿಗಳು ಪ್ರಕರಣದ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸರಣಿ ಕಳ್ಳತನ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದು, ವಿಷೇಷ ತಂಡವನ್ನು ರಚಿಸಿ ಶೀಘ್ರವೇ ಪ್ರಕರಣವನ್ನು ಭೇದಿಸಲಾಗುವುದು. ಲಕ್ಷಾಂತರ ರೂ ರ‍್ಚು ಮಾಡಿ ಮನೆ ಕಟ್ಟಿಸುವ ಮಾಲಿಕರು, ೪-೫ ಸಾವಿರ ರ‍್ಚು ಮಾಡಿ ಸಿಸಿ ಕ್ಯಾಮರಾ ಹಾಕಿಸಬೇಕು. ಮುಖ್ಯವಾಗಿ ಮನೆಗಳಿಗೆ ಬೀಗ ಹಾಕಿ ಬೇರೆ ಕಡೆಗಳಿಗೆ ತೆರಳುವ ಸಂರ‍್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಇಂತಹ ಪ್ರಕರಣಗಳನ್ನು ತಪ್ಪಿಸಬಹುದು.

– ಪ್ರಭುಗೌಡ ಕಿರೇದಹಳ್ಳಿ.

ಡಿವಾಯ್‌ಎಸ್ಪಿ.

“ಮನೆ ಮಾಲಿಕರು ದೂರದ ಊರುಗಳಿಗೆ ಹೋಗುವ ಸಂರ‍್ಭದಲ್ಲಿ ಠಾಣೆಗೆ ಮಾಹಿತಿ ನೀಡಿದರೆ ನಮ್ಮಲ್ಲಿರುವ ಸಿಸಿ ಕ್ಯಾಮರಾಗಳನ್ನು ಮನೆಯ ಬಳಿ ಅಳವಡಿಸುತ್ತೇವೆ. ಇಂತಹ ಸಂರ‍್ಭದಲ್ಲಿ ನಾಗರಿಕ ಸಮುದಾಯದ ಸಹಕಾರ ನಮಗೆ ಅತ್ಯಗತ್ಯ”

– ಎಸ್.ಎಸ್. ಬಿಳಗಿ.

ಸಿಪಿಐ, ರೋಣ.


Spread the love

LEAVE A REPLY

Please enter your comment!
Please enter your name here