ವಿಜಯಸಾಕ್ಷಿ ಸುದ್ದಿ, ಗದಗ: ರೋಟರಿ ಸಂಸ್ಥೆಯು ವಿಶ್ವದಲ್ಲಿ ಅನೇಕ ಸಾಮಾಜಿಕ ಹಾಗೂ ಶೈಕ್ಷಣಿಕ ಕೆಲಸಗಳನ್ನು ನಿರ್ವಹಿಸುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದೆ. ಇಂತಹ ಕೆಲಸಗಳನ್ನು ಸಂಸ್ಥೆ ಸದಾ ಮುಂದುವರೆಸಬೇಕು. ವಿಶ್ವದಲ್ಲಿ ಸೇವಾ ಧರ್ಮವನ್ನು ಪಾಲಿಸಲು ರೋಟರಿ ಮಾರ್ಗದರ್ಶಿಯಾಗಿದೆಯೆಂದು ಹಿರೇಮಠದ ಷಟಸ್ಥಲ ಬ್ರಹ್ಮ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು.
ರೋಟರಿ ಸಂಸ್ಥೆ ಗದಗ-ಬೆಟಗೇರಿಯ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ರೊ. ಡಾ. ರಾಜೇಂದ್ರ ಕಾಶೀನಾಥ ಗಚ್ಛಿನಮಠ ಹಾಗೂ ಕಾರ್ಯದರ್ಶಿಯಾಗಿ ರೊ. ಸುರೇಶ ವೀರಪ್ಪ ಕುಂಬಾರ ಪದಗ್ರಹಣ ಮಾಡಿದರು. ಅಧಿಕಾರ ಹಸ್ತಾಂತರ ಸಮಾರಂಭಕ್ಕೆ ಇನ್‌ಸ್ಟಾಲಿಂಗ್ ಆಫಿಸರ್ ಆಗಿ ಆಗಮಿಸಿದ ರೊ. ಪಿಡಿಜಿ. ಡಾ. ಪ್ರಾಣೇಶ ಜಹಗೀರದಾರ್ ನಿಕಟ ಪೂರ್ವ ಅಧ್ಯಕ್ಷರಾದ ರೊ. ಡಾ. ಆರ್.ಬಿ. ಉಪ್ಪಿನರಿಂದ ಅಧ್ಯಕ್ಷ ಸ್ಥಾನವನ್ನು ಡಾ. ರಾಜೇಂದ್ರ ಕಾಶೀನಾಥ ಗಚ್ಛಿನಮಠರಿಗೆ ಹಸ್ತಾಂತರಿಸಿದರು.
ಡಾ. ಪ್ರಾಣೇಶ ಜಹಗಿರದಾರ್ ಮಾತನಾಡಿದರು. ರೊ. ಮಹೇಶ ಕುಂದ್ರಾಳಹಿರೇಮಠ ಪ್ರಾರ್ಥನಾ ಗೀತೆ ಹಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೊ.ಡಾ. ಆರ್.ಬಿ. ಉಪ್ಪಿನ ಸ್ವಾಗತಿಸಿದರು. ರೊ. ಸಂತೋಷ ಅಕ್ಕಿ ರೋಟರಿ ಕೈಗೊಂಡ ಕಾರ್ಯಕ್ರಮದ ಸಂಕ್ಷಿಪ್ತ ವರದಿ ನೀಡಿದರು. ಡಾ. ಉಮೇಶ ಪುರದ, ರೊ. ವಿಶ್ವನಾಥ ಯಳಮಲಿ, ರೊ. ಡಾ. ವಿನಯ ಟಿಕಾರೆ ಅತಿಥಿಗಳನ್ನು ಪರಿಚಯಿಸಿದರು. ಡಾ. ಜಿ.ಬಿ. ಪಾಟೀಲ ಹಾಗೂ ರೊ. ಮಹಾಂತೇಶ ಬಾತಾಖಾನಿ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಸಭೆಗೆ ಪರಿಚಯಿಸಿದರು. ಗದಗ ರೆವೆನ್ಯೂ ಜಿಲ್ಲೆಯ ಅಸಿಸ್ಟಂಟ್ ಗವರ್ನರ್ ರೊ. ವ್ಹಿ.ಕೆ. ಗುರುಮಠ ವೇದಿಕೆಯಲ್ಲಿದ್ದರು. ರೊ. ಡಾ. ರಾಜೇಂದ್ರ ಗಚ್ಛನಮಠ 2025-26ರ ರೋಟರಿ ಯೋಜನೆಯ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.
ಈ ಸಮಾರಂಭದಲ್ಲಿ ಗದಗ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಅಧ್ಯಕ್ಷ ತಾತನಗೌಡ ಪಾಟೀಲ, ಇನ್ನರ್ ವ್ಹೀಲ್ ಸಂಸ್ಥೆ ಗದಗ-ಬೆಟಗೇರಿಯ ಅಧ್ಯಕ್ಷರಾದ ಅಶ್ವಿನಿ ಜಗತಾಪ, ಕಾರ್ಯದರ್ಶಿಗಳಾದ ಶಿವಲೀಲಾ ಅಕ್ಕಿ, ಸಂಸ್ಥೆಯ ಸದಸ್ಯರಾದ ರೊ. ಶೇಖರ ಡಿ.ಸಜ್ಜನರ, ರೊ. ಡಾ. ರಾಜಶೇಖರ ಬಳ್ಳಾರಿ, ರೊ.ಡಾ. ವ್ಹಿ.ಸಿ. ಕಲ್ಮಠ, ರೊ. ಚನ್ನವೀರಪ್ಪ ಹುಣಶಿಕಟ್ಟಿ, ರೊ. ಅಕ್ಷಯ ಶೆಟ್ಟಿ, ರೊ. ಅಶೋಕ ಅಕ್ಕಿ, ರೊ. ಶ್ರೀಧರ ಧರ್ಮಾಯತ, ರೊ. ಚಂದ್ರಮೌಳಿ ಜಾಲಿ, ರೊ. ಶೈಲೇಂದ್ರ ಬಿರಾದಾರ, ರೊ. ಶಿವಾಚಾರ್ಯ ಹೊಸಳ್ಳಿಮಠ, ರೊ. ನರೇಶ ಜೈನ, ರೊ. ಅನಿಲ ಹಂದ್ರಾಳ, ರೊ. ಡಾ. ಕಮಲಾಕ್ಷಿ ಅಂಗಡಿ ಮುಂತಾದವರಿದ್ದರು. ರೊ. ಶ್ರೀಧರ ಸುಲ್ತಾನಪೂರ ಹಾಗೂ ರೊ. ಬಾಲಕೃಷ್ಣ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ರೊ. ಸುರೇಶ ವೀರಪ್ಪ ಕುಂಬಾರ ವಂದಿಸಿದರು.