ವಿಜಯಸಾಕ್ಷಿ ಸುದ್ದಿ, ಗದಗ : ಇ-ತ್ಯಾಜ್ಯ ನಮ್ಮ ಪರಿಸರವನ್ನು ಕಲುಷಿತಗೊಳಿಸುತ್ತಿದೆ. ಆದ್ದರಿಂದ, ಪ್ರತಿಯೊಬ್ಬರೂ ಇ-ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದು ರೋಟರಿ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷ ಶ್ರೀಧರ ಸುಲ್ತಾನಪುರ ತಿಳಿಸಿದರು.
ರೋಟರಿ ಸಂಸ್ಥೆ ಗದಗ-ಬೆಟಗೇರಿಯ ಸಾಪ್ತಾಹಿಕ ಸಭೆಯಲ್ಲಿ ಎಲೆಕ್ಟಾçನಿಕ್ಸ ತ್ಯಾಜ್ಯ ವಿಷಯದ ಕುರಿತು ಮಾತನಾಡಿದ ಅವರು, ಭಾರತ ದೇಶವು ಪ್ರತಿ ವರ್ಷ ಸುಮಾರು 1.6 ಮೆಟ್ರಿಕ್ ಟನ್ ಎಲೆಕ್ಟಾçನಿಕ ತ್ಯಾಜ್ಯನ್ನು ಸೃಷ್ಟಿಸುತ್ತದೆ. ಇವುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದ ಅವಶ್ಯಕವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಗರದಲ್ಲಿ ಇ-ತ್ಯಾಜ್ಯ ಉತ್ಪಾದನೆಯಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಹಲವಾರು ಅಧ್ಯಯನಗಳು ಸೂಚಿಸಿವೆ. ಇದರಿಂದ ನಮ್ಮ ಸುತ್ತಮುತ್ತಲಿನ ಪರಿಸರವು ಕಲುಷಿತಗೊಳ್ಳುತ್ತಿದ್ದು, ಅನೇಕ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಸಾರ್ವಜನಿಕರು ಹಾಗೂ ಕಸ ವಿಲೇವಾರಿ ಮಾಡುವ ಸಂಸ್ಥೆಗಳು ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡಿ ಪರಸರನ್ನು ರಕ್ಷಿಸಬೇಕು ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ರೊ. ಚಂದ್ರಮೌಳಿ ಜಾಲಿ ಸ್ವಾಗತಿದರು. ಸಂಸ್ಥೆಯ ಕಾರ್ಯದರ್ಶಿ ವೀಣಾ ತಿರ್ಲಾಪೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ರೋಟರಿ ಸಂಸ್ಥೆ ಗದಗ-ಬೆಟಗೇರಿಯ ಸದಸ್ಯರಾದ ರೊ. ಶಿವಾಚಾರ್ಯ ಹೊಸಳ್ಳಿಮಠ, ರೊ. ಇಂ. ಮಹಾಂತೇಶ ಬಾತಾಖಾನಿ, ರೊ. ಹೆಚ್.ಎಸ್. ಪಾಟೀಲ, ರೊ. ವಿಶ್ವನಾಥ ಯಳಮಲಿ, ರೊ. ಡಾ. ರಾಜಶೇಖರ ಬಳ್ಳಾರಿ, ರೊ. ಡಾ. ಪ್ರದೀಪ ಉಗಲಾಟ, ರೊ. ಕೊಟ್ರೇಶ ಹಿರೇಗೌಡರ, ರೊ.ಡಾ. ಕಮಲಾಕ್ಷಿ ಅಂಗಡಿ, ರೊ. ಅಕ್ಷಯ ಶೆಟ್ಟಿ, ರೊ. ಸಂತೋಷ ಅಕ್ಕಿ, ರೊ.ಡಾ. ಆರ್.ಬಿ. ಉಪ್ಪಿನ ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ವೀಣಾ ತಿರ್ಲಾಪೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.