ಮಂಡ್ಯ:- ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ ಮಾಡಿರುವ ಘಟನೆ ಸಕ್ಕರೆ ನಾಡು ಮಂಡ್ಯದ ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದ ಬಳಿ ತಡರಾತ್ರಿ ಜರುಗಿದೆ
Advertisement
ತಡರಾತ್ರಿ ಬಾರ್ ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಉಂಟಾದ ಜಗಳ ರೌಡಿ ಶೀಟರ್ ಕೊಲೆಯಲ್ಲಿ ಅಂತ್ಯವಾಗಿದೆ. ಲಕ್ಷ್ಮೀ ಸಾಗರ ಗ್ರಾಮದ ನಿವಾಸಿ ಮಹೇಶ್(26) ಕೊಲೆಯಾದ ರೌಡಿ ಶೀಟರ್. ಮೊದಲಿಗೆ ಬಾರ್ ನಲ್ಲಿ ಯುವಕರ ನಡುವೆ ಕಿರಿಕ್ ನಡೆದಿದೆ. ಬಳಿಕ ಅಮೃತಿ ಗ್ರಾಮದ ಹೆದ್ದಾರಿ ಬಳಿ ಮಹೇಶ್ ನನ್ನು ಭೀಕರವಾಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ತಡರಾತ್ರಿ ನಡೆದ ಕೊಲೆಗೆ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಸ್ಥಳಕ್ಕೆ ಮೇಲುಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಮೇಲುಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


