HomeSports NewsRR Vs DC IPL 2025: ಸೂಪರ್ ಓವರ್‌ನಲ್ಲಿ ರಾಜಸ್ಥಾನ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್!

RR Vs DC IPL 2025: ಸೂಪರ್ ಓವರ್‌ನಲ್ಲಿ ರಾಜಸ್ಥಾನ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್!

For Dai;y Updates Join Our whatsapp Group

Spread the love

ದೆಹಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್‌ನ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನ ಸೂಪರ್ ಓವರ್‌ನಲ್ಲಿ ಮಣಿಸಿ ಅಮೋಘ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 188 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ಕೂಡ ಅಷ್ಟೇ ಮೊತ್ತವನ್ನು ಪೇರಿಸಿತು. ಹೀಗಾಗಿ ಪಂದ್ಯ ಸೂಪರ್ ಓವರ್‌ನತ್ತ ಸಾಗಿತು. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 11 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಇನ್ನು 2 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು.

ಡೆಲ್ಲಿ ಗೆಲ್ಲಿಸುವಲ್ಲಿ ಕನ್ನಡಿಗ ಕೆ.ಎಲ್.ರಾಹುಲ್​ ಪ್ರಮುಖ ಪಾತ್ರ ನಿರ್ವಹಿಸದರು. ಪಂದ್ಯದ ಆರಂಭದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಪರಿಸ್ಥಿತಿಯನ್ನು ಅರಿತ ರಾಹುಲ್, ಚೇತರಿಕೆಯ ಇನ್ನಿಂಗ್ಸ್​ ಕಟ್ಟಿದರು. 2 ಸಿಕ್ಸರ್, ಎರಡು ಬೌಂಡರಿಯೊಂದಿಗೆ 38 ರನ್​ಗಳ ಕಾಣಿಕೆ ನೀಡಿದರು. ಇದರ ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ 188 ರನ್​ಗಳಿಸುವಲ್ಲಿ ಯಶಸ್ವಿ ಆಯಿತು. ಅಲ್ಲದೇ, ಫೀಲ್ಡಿಂಗ್ ವೇಳೆ ಅಕ್ಸರ್ ಪಟೇಲ್ ಜೊತೆ ಸೇರಿ ಎದುರಾಳಿ ಧ್ರುವ್ ಜುರೇಲ್​​ರನ್ನು ರನ್​ಔಟ್ ಮಾಡುವಲ್ಲಿ ಯಶಸ್ವಿಯಾದರು. ಪರಿಣಾಮ ಪಂದ್ಯ ಸೂಪರ್​ ಓವರ್​ನತ್ತ ತಿರುಗಲು ಸಹಾಯ ಆಯಿತು.

ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 11 ರನ್​ಗಳಿಸಿತ್ತು. 12 ರನ್​ಗಳ ಗುರಿ ಬೆನ್ನು ಹತ್ತಲು ಡೆಲ್ಲಿ ಕ್ಯಾಪಿಟಲ್ಸ್​ ಕಡೆಯಿಂದ ಕೆ.ಎಲ್.ರಾಹುಲ್ ಹಾಗೂ ಸ್ಟಬ್ಸ್ ಕ್ರೀಸ್​ಗೆ ಬಂದರು. ಮೊದಲ ಬಾಲ್ ಎದುರಿಸಿದ ರಾಹುಲ್, ಎರಡು ರನ್​ಗಳಿಸುವಲ್ಲಿ ಯಶಸ್ವಿಯಾದರು. ಎರಡನೇ ಬಾಲ್​ನಲ್ಲಿ ಸಂದೀಪ್ ಶರ್ಮಾಗೆ ಬೌಂಡರಿ ಬಾರಿಸಿದರು. ಮೂರನೇ ಬಾಲ್​ ಸಿಂಗಲ್ ತೆಗೆದುಕೊಂಡರು. ಆ ಮೂಲಕ ಮೂರು ಬಾಲ್​ನಲ್ಲಿ 7 ರನ್​ಗಳಿಸಿದರು. ಕೊನೆಯ ಮೂರು ಬಾಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 6 ರನ್​ಗಳ ಅಗತ್ಯ ಇತ್ತು. ನಾಲ್ಕನೇ ಬಾಲ್​ನಲ್ಲಿ ಸ್ಟಬ್ಸ್​ ಸಿಕ್ಸರ್​ ಬಾರಿಸುವ ಮೂಲಕ ಪಂದ್ಯ ಫಿನಿಶ್ ಮಾಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!