HomeSports NewsRR vs RCB: ಆರ್ʼಸಿಬಿಗೆ 174 ರನ್ ಟಾರ್ಗೆಟ್ ನೀಡಿದ ರಾಯಲ್ಸ್..!

RR vs RCB: ಆರ್ʼಸಿಬಿಗೆ 174 ರನ್ ಟಾರ್ಗೆಟ್ ನೀಡಿದ ರಾಯಲ್ಸ್..!

For Dai;y Updates Join Our whatsapp Group

Spread the love

ಜೈಪುರ: ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದು, ಯಶಸ್ವಿ ಜೈಸ್ವಾಲ್ ಮಾತ್ರ ಅರ್ಧಶತಕ ಸಿಡಿಸಿ ತಂಡದ 173ರ ಸವಾಲಿನ ಮೊತ್ತ ದಾಖಲಿಸಲು ನೆರವಾದರು.

ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ಪವರ್​ ಪ್ಲೇನಲ್ಲಿ 45 ರನ್​ಗಳಿಸಿದರು. ಪವರ್​ ಪ್ಲೇನಲ್ಲಿ ರನ್​ಗಳಿಸಲು ಪರದಾಡಿದ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಕೃನಾಲ್ ಪಾಂಡ್ಯ ಬೌಲಿಂಗ್​ನಲ್ಲಿ ಸ್ಟಂಪ್ ಆದರು.  ಅವರು 19 ಎಸೆತಗಳಲ್ಲಿ 15 ರನ್​ಗಳಿಸಿ ಔಟ್ ಆದರು. ಆದರೆ ಯಶಸ್ವಿ ಜೈಸ್ವಾಲ್ 47 ಎಸೆತಗಳಲ್ಲಿ 10 ಬೌಂಡರಿ , 2 ಸಿಕ್ಸರ್ ಸಹಿತ 75 ರನ್​ಗಳಿಸಿ ತಂಡಕ್ಕೆ ನೆರವಾದರು.

ಇವರು 2ನೇ ವಿಕೆಟ್​ ಜೊತೆಯಾಟದಲ್ಲಿ ಪರಾಗ್ ಜೊತೆ 56 ರನ್​ಗಳ ಜೊತೆಯಾಟ ನಡೆಸಿದರು. ಪರಾಗ್ 22 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 30 ರನ್​ಗಳಿಸಿ ದಯಾಳ್​ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಧುವ್ ಜುರೆಲ್ ಅಜೇಯ 35ರನ್​ಗಳಿಸಿ 174ರನ್​ಗಳ ಸವಾಲಿನ ಗುರಿ ನೀಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!