ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶನಿವಾರ ಶಿರಹಟ್ಟಿಯ ಪಟ್ಟಣ ಪಂಚಾಯಿತಿಯ 2025-26ನೇ ಸಾಲಿನ ಎಲ್ಲ ಮೂಲಗಳಿಂದ 708.60 ಲಕ್ಷ ಮತ್ತು ಎಲ್ಲ ಮೂಲಗಳಿಂದ ನಿರೀಕ್ಷಿಸಿದ ಮೊತ್ತ 720.80 ಲಕ್ಷದಂತೆ 12.20ಲಕ್ಷ ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು.
ಬಜೆಟ್ ಮಂಡನೆ ನಂತರ ಮಾತನಾಡಿದ ಅಧ್ಯಕ್ಷೆ ದೇವಕ್ಕ ಗುಡಿಮನಿ, ಶಿರಹಟ್ಟಿ ಪ.ಪಂ 2024ರ ಅಂತ್ಯಕ್ಕೆ ಟ್ರೇಡ್ ಲೈಸನ್ಸ್ನಲ್ಲಿ ಶೇ. 100 ಪ್ರಗತಿ ಸಾಧಿಸಿದೆ. ಸಾರ್ವಜನಿಕರು, ಪಂಚಾಯಿತಿಯ ಅಧಿಕಾರಿ-ಸಿಬ್ಬಂದಿಗಳ ಹಾಗೂ ಪೌರಕಾರ್ಮಿಕರ ಸಹಕಾರದಿಂದ ಪಟ್ಟಣವನ್ನು ಮುನ್ನಡೆಸಲಾಗುತ್ತಿದೆ. ಪ್ರಾರಂಭ ಶುಲ್ಕ 6 ಕೋಟಿ 62ಲಕ್ಷ 67 ಸಾವಿರ ಇದ್ದು, ಎಲ್ಲಾ ಮೂಲಗಳಾದ ರಾಜಸ್ವ ಬಂಡವಾಳ ಹಾಗೂ ಅಸಾಧಾರಣ ಆದಾಯಗಳಿಂದ ನಿರೀಕ್ಷಿಸಿದ ಮೊತ್ತ 7 ಕೋಟಿ 20ಲಕ್ಷ 80 ಸಾವಿರ, ಎಲ್ಲಾ ಮೂಲಗಳಾದ ರಾಜಸ್ವ ಬಂಡವಾಳ ಹಾಗೂ ಅಸಾಧಾರಣ ವೆಚ್ಚಗಳಿಂದ ನಿರೀಕ್ಷಿಸಿದ ಮೊತ್ತ 7 ಕೋಟಿ 8 ಲಕ್ಷ 60 ಸಾವಿರ ಇದ್ದು, 12 ಲಕ್ಷ 20 ಸಾವಿರ ಳಿತಾಯ ಬಜೆಟ್ ಇದಾಗಿದೆ.
ಶಿರಹಟ್ಟಿ ಪಟ್ಟಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಪ್ರಾಧಾನ್ಯತೆ ನೀಡಿ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸಿಕೊಂಡು ಹೆಚ್ಚು ಬಂಡವಾಳ ಆಸ್ತಿಗಳನ್ನು ಸೃಜಿಸುವುದೇ ಪಟ್ಟಣ ಪಂಚಾಯಿತಿಯ ಗುರಿಯಾಗಿದೆ. ನಮ್ಮ ಪಟ್ಟಣವನ್ನು ಸ್ವಚ್ಛ ಹಾಗೂ ಸುಂದರ ತಾಣವನ್ನಾಗಿಸಲು ಆಯ-ವ್ಯಯದಲ್ಲಿ ಪ್ರಾತಿನಿಧ್ಯತೆಯನ್ನು ನೀಡಲಾಗಿದೆ ಎಂದರು.
ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪಾಧ್ಯಕ್ಷೆ ನೀಲಮ್ಮ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಸದಸ್ಯರಾದ ಪರಮೇಶ ಪರಬ, ಅಶರತ್ಅಲಿ ಢಾಲಾಯತ, ಶಿವರಾಜ ಕಪ್ಪತ್ತನವರ, ಇಂಜಿನಿಯರ್ ಕಾಟೇವಾಲಿ ಮುಂತಾದವರು ಉಪಸ್ಥಿತರಿದ್ದರು.