ಬೆಳಗಾವಿ: ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ 150 ಕೋಟಿ ರೂ. ಆಮಿಷವೊಡ್ಡಿದ ಆರೋಪದ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, 150 ಕೋಟಿ ರೂ. ಆಫರ್ ಎಂದು ಹೇಳಿದ್ದರು. ಅದು ಪಬ್ಲಿಕ್ ಡೊಮೈನ್ನಲ್ಲೂ ಇದೆ. ಮಾಧ್ಯಮಗಳ ಮುಂದೆ ಅವರೇ ಹೇಳಿದ್ದಾರೆ. ಆ ವಿಡಿಯೋ ನಾವ್ಯಾರು ಪೋಸ್ಟ್ ಮಾಡಿದ್ದಲ್ಲ ಎಂದರು.
ಇನ್ನೂ ಬಿಜೆಪಿಯವರು ಮಾಣಿಪ್ಪಾಡಿಗೆ ಧಮ್ಕಿ ಹಾಕಿರಬಹುದು. ಅದಕ್ಕೆ ಅವರು ಉಲ್ಟಾ ಹೇಳಿರಬಹುದು. ತನಿಖೆಗೆ ಕೊಡುವ ಬಗ್ಗೆ ಚರ್ಚೆ ಮಾಡುತ್ತೇವೆ. ವಕ್ಫ್ ವಿವಾದ ಮುಚ್ಚಿ ಹಾಕಲು ಆಮಿಷ ಒಡ್ಡಿರುವ ಆರೋಪದಲ್ಲಿ ಕಾಂಗ್ರೆಸ್ ನಾಯಕರಿದ್ದರೂ ತನಿಖೆ ಮಾಡೋಣ. ಪರ, ವಿರೋಧ ಟೀಕೆ ಟಿಪ್ಪಣಿ ಬರುತ್ತವೆ. ನಾವು ಸರ್ಕಾರದಲ್ಲಿ ಚರ್ಚೆ ಮಾಡುತ್ತೇವೆ. ಯಾರಿದ್ದಾರೆ ಇರಲಿ ತನಿಖೆ ಮಾಡೋಣ. ಯಾರದ್ದು ತಪ್ಪಿರುತ್ತೆ ಹೊರಬರುತ್ತದೆ ಎಂದರು.