ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಈ ನಡುವೆ ಅವರ ಪತ್ನಿ ವಿಜಯಲಕ್ಷ್ಮೀ ಅವರ ಮನೆಯಲ್ಲಿ 3 ಲಕ್ಷ ರೂಪಾಯಿಗಳ ಕಳ್ಳತನ ನಡೆದಿದೆ. ಈ ಸಂಬಂಧ ವಿಜಯಲಕ್ಷ್ಮಿ ಮ್ಯಾನೇಜರ್ ಸಿಕೆ ಅಚ್ಚುಕಟ್ಟು ಠಾಣೆಗೆ ಕಳ್ಳತನ ದೂರು ನೀಡಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೆಪ್ಟೆಂಬರ್ 4 ರಂದು ಮೈಸೂರಿಗೆ ತೆರಳಿದ್ದರು.
ಮನೆಯ ವ್ಯಾಡ್ರೂಬ್ ಕಾಟನ್ ಬಾಕ್ಸ್ನಲ್ಲಿ ಹಣ ತೆಗೆದುಕೊಡಲು ಹೇಳಿದ್ದರು. ಮ್ಯಾನೇಜರ್ ಸ್ವಲ್ಪ ಹಣ ತೆಗೆದು ಕೊಟ್ಟು ಉಳಿದ ಹಣ ಅಲ್ಲೇ ಇಟ್ಟಿದ್ದರಂತೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅದೇ ದಿನ ಮೈಸೂರಿಗೆ ತೆರಳಿದ್ದರು. ಮನೆಯ ಬೀಗವನ್ನ ತಾಯಿಗೆ ಕೊಟ್ಟು ಮ್ಯಾನೇಜರ್ ಕೆಲಸದ ಮೇಲೆ ಹೊರಗೆ ಹೋಗಿದ್ರಂತೆ. ಸೆಪ್ಟೆಂಬರ್ 7ರಂದು ವಿಜಯಲಕ್ಷ್ಮಿ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ.
ಸೆಪ್ಟೆಂಬರ್ 8 ರಂದು ವ್ಯಾಡ್ರೂಬ್ ನಲ್ಲಿ ಹಣ ನೋಡಿದಾಗ ಹಣ ಕಾಣಿಸಿಲ್ಲ. ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ಎಲ್ಲಾ ಕಡೆ ಹುಡುಕಾಡಿದ್ರು ಹಣ ಸಿಕ್ಕಿಲ್ಲ ಎನ್ನಲಾಗ್ತಿದೆ. ಬಳಿಕ ಮನೆ ಕೆಲಸದವರನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ನೀಡಿಲ್ಲ. ಮನೆಯ ಕೆಲಸದವರ ಮೇಲೆ ಅನುಮಾನ ಮೂಡಿದ ಹಿನ್ನೆಲೆ ಮ್ಯಾನೇಜರ್ ನಾಗರಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.