ಕಲಬುರಗಿ- ಆರ್ ಟಿಐ ಕಾರ್ಯಕರ್ತನಿಂದ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ರಾಜ್ಯ ಮಾಹಿತಿ ಆಯೋಗದ ಆಯುಕ್ತರು ಲೋಕಾ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಕಲಬುರಗಿಯಲ್ಲಿ ಜರುಗಿದೆ.
Advertisement
  
ರವೀಂದ್ರ ಗುರನಾಥ ಡಾಕಪ್ಪ ಲೋಕಾ ಬಲೆಗೆ ಬಿದ್ದ ಕಲಬುರಗಿ ಪೀಠದ ಆಯುಕ್ತ. ಇವರು ಕಲಬುರಗಿಯ ತಮ್ಮ ಕಚೇರಿಯಲ್ಲಿ ಪ್ರಕರಣ ಒಂದಕ್ಕೆ ಸಂಬಂಧಪಟ್ಟಂತೆ ಬ್ಲಾಕ್ ಲಿಸ್ಟ್ ನಿಂದ ತೆಗೆಯಲು ಆರ್ ಟಿಐ ಕಾರ್ಯಕರ್ತ ಸಾಶಿರಾಮ ಬೆನಕನಹಳ್ಳಿಯಿಂದ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ವೇಳೆ ಕಚೇರಿಯಲ್ಲೇ ಮುಂಗಡವಾಗಿ RTI ಕಾರ್ಯಕರ್ತನಿಂದ ಒಂದು ಲಕ್ಷ ಹಣ ಪೋನ್ ಪೇ ಮಾಡಿಸಿಕೊಳ್ಳುವಾಗ ದೂರು ಆಧರಿಸಿ ದಾಳಿ ನಡೆಸಿದ ಲೋಕಾ ಟೀಂ, ಭ್ರಷ್ಟ ಅಧಿಕಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೋಕಾಯುಕ್ತ ಡಿವೈಎಸ್ ಪಿ ಗೀತಾ ಬೇನಾಳ್ ನೈತೃತ್ವದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.


