ವಿಜಯಸಾಕ್ಷಿ ಸುದ್ದಿ, ಗದಗ
ಕಳೆದ ಹಲವು ತಿಂಗಳಿಂದ ಖಾಯಂ ಪೌರಾಯುಕ್ತರಿಲ್ಲದೇ ಪ್ರಭಾರಿಗಳ ಉಸ್ತುವಾರಿಯಲ್ಲಿ ಕಾರ್ಯಭಾರ ನಡೆಸುತ್ತಿದ್ದ ನಗರಸಭೆಗೆ ಕೊನೆಗೂ ಸರಕಾರ ಪೌರಾಯುಕ್ತರ ನೇಮಕ ಮಾಡಿ ಬುಧವಾರ ಸಂಜೆ ಆದೇಶ ಹೊರಡಿಸಿದೆ.

ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿದ್ದ (ಅಭಿವೃದ್ಧಿ)
ಬಿ.ಕೆ ರುದ್ರಮುನಿ ಅವರನ್ನು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರನ್ನಾಗಿ ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ಈ ಹಿಂದಿನ ನಗರಸಭೆ ಪೌರಾಯುಕ್ತರಾಗಿದ್ದ ರಮೇಶ್ ಸುಣಗಾರ ಅವರ ನಿವೃತ್ತಿಯಿಂದ ಖಾಯಂ ಪೌರಾಯುಕ್ತರ ನೇಮಕವಾಗಿರಲಿಲ್ಲ. ಇದೀಗ ಬಿ.ಕೆ.ರುದ್ರಮುನಿ ಅವರನ್ನು ಪೌರಾಯುಕ್ತರನ್ನಾಗಿ ನೇಮಕ ಮಾಡಲಾಗಿದೆ.



