ಕನ್ನಡದ ನಟಿ ರುಕ್ಮಿಣಿ ವಸಂತ್ ಗೆ ಪರಭಾಷೆಯಲ್ಲೂ ಸಖತ್ ಡಿಮ್ಯಾಂಡ್ ಇದೆ. ಸ್ಟಾರ್ ನಟರ ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ಬಣ್ಣ ಹಚ್ಚುತ್ತಿದ್ದಾರೆ. ಕೈ ತುಂಬಾ ಸಿನಿಮಾಗಳಿರುವ ನಟಿ ಇದೀಗ ಸ್ಟಾರ್ ನಟನ ಚಿತ್ರದಲ್ಲಿ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.
ವಿಜಯ್ ದೇವರಕೊಂಡ ನಟನೆಯ, ರವಿ ಕಿರಣ್ ಕೋಲಾ ನಿರ್ದೇಶನದ ‘ರೌಡಿ ಜನಾರ್ಧನ್’ ಸಿನಿಮಾದಲ್ಲಿ ರಕ್ಮಿಣಿ ವಸಂತ್ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ಡೇಟ್ ಹೊಂದಾಣಿಕೆ ಸಾಧ್ಯವಾಗದೆ ನಟಿ ಸಿನಿಮಾ ತಂಡದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಸದ್ಯ ರುಕ್ಮಿಣಿ ವಸಂತ್ ಜೂನಿಯರ್ ಎನ್ಟಿಆರ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘NTR31’ನಲ್ಲಿ ನಟಿಸಬೇಕಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ರುಕ್ಮಿಣಿ ‘ರೌಡಿ ಜನಾರ್ಧನ್’ ಸಿನಿಮಾದಿಂದ ಹೊರ ಹೋಗಿದ್ದಾರಂತೆ.
‘ಬೀರ್ಬಲ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ರಕ್ಮಿಣಿ ವಸಂತ್ ಗೆ 2023ರಲ್ಲಿ ರಿಲೀಸ್ ಆದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ದೊಡ್ಡ ಮಟ್ಟದಲ್ಲಿ ಖ್ಯಾತ ತಂದುಕೊಟ್ಟಿತ್ತು. ಆ ಬಳಿಕ ಪರಭಾಷೆಯಲ್ಲೂ ನಟಿಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಅಗಿದೆ.