ಲಕ್ಷ್ಮೇಶ್ವರ: ಲಕ್ಷ್ಮೇಶ್ವರದ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಟಿಯು ಬೆಳಗಾವಿ ವಿಭಾಗ ಮಟ್ಟದ ವಿದ್ಯಾರ್ಥಿನಿಯರ ಥ್ರೋ-ಬಾಲ್ ಪಂದ್ಯಾವಳಿಯಲ್ಲಿ ಅತಿಥೇಯ ಲಕ್ಷ್ಮೇಶ್ವರದ ಅಗಡಿ ಕಾಲೇಜಿನ ತಂಡ ಪ್ರಥಮ ಸ್ಥಾನ ಗಳಿಸಿತು. ಧಾರವಾಡದ ಎಸ್‌ಡಿಎಂ ಕಾಲೇಜಿನ ತಂಡ ದ್ವಿತೀಯ ಸ್ಥಾನ ಪಡಿಸಿಕೊಂಡಿತು. ಒಟ್ಟು 10 ಕಾಲೇಜಿನ ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯನ್ನು ಪ್ರಾಚಾರ್ಯ ಪರಶುರಾಮ ಬಾರಕಿ ಉದ್ಘಾಟಿಸಿದರು. ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಲ್.ಟಿ. ಪಾಟೀಲ, ಬೆಳಗಾವಿ ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಮಂಜುನಾಥ, ಎಸ್.ಎಫ್. ಕೊಡ್ಲಿ, ವಿಕ್ರಂ ಶಿರೋಳ ಮುಂತಾದವರಿದ್ದರು.
Trending Now



