ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಬಸ್ ಸೌಲಭ್ಯದ ಕೊರತೆ ಬಹುತೇಕ ಎಲ್ಲ ಗ್ರಾಮಗಳಲ್ಲಿ ಕಂಡು ಬರುತ್ತಿದ್ದು, ನಿತ್ಯ ಮುಂಜಾನೆ ಶಾಲಾ-ಕಾಲೇಜುಗಳಿಗೆ, ನೌಕರಿಗೆ ತೆರಳುವವರಿಗೆ ಬಸ್ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಸಂಜೆ ವಾಪಸ್ಸು ಮನೆ ತಲುಪಲು ಸಹ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಶಿಗ್ಲಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಶಾಲಾ ಮಕ್ಕಳು ಬಸ್ ಗದ್ದಲವಿದ್ದದ್ದರಿಂದ ನಿಲ್ದಾಣದ ಹತ್ತಿರ ನಿಂತ ಟ್ರ್ಯಾಕ್ಟರ್ ಹತ್ತಿ ಮನೆ ಸೇರಿದ ಘಟನೆ ನಡೆದಿದೆ.
ಶಿಗ್ಲಿ ಗ್ರಾಮಕ್ಕೆ ಶಿಕ್ಷಣಕ್ಕಾಗಿ ಸುತ್ತಮುತ್ತಲಿನ ಸೂರಣಗಿ, ದೊಡ್ಡೂರು, ಶ್ಯಾಬಳ, ದೊಡ್ಡೂರು ತಾಂಡಾ, ಉಂಡೆನಹಳ್ಳಿ, ಉಳ್ಳಟ್ಟಿ ಸೇರಿದಂತೆ ಅನೇಕ ಗ್ರಾಮಗಳಿಂದ ನಿತ್ಯ ಶಾಲೆಗಳಿಗೆ ಬರುತ್ತಿದ್ದು, ಮುಂಜಾನೆ ಶಾಲೆಗೆ ಬರುವಾಗ ಹಾಗೂ ಸಂಜೆ ಶಾಲೆ ಬಿಟ್ಟ ವೇಳೆ ಬಸ್‌ಗಳ ಕೊರತೆ ಇದ್ದುದರಿಂದ ನಿತ್ಯ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ. ಈ ಹಳ್ಳಿಗಳಿಗೆ ಸಂಜೆಯ ವೇಳೆಗೆ ಕೇವಲ ಒಂದೊAದೇ ಬಸ್ ಸೌಲಭ್ಯವಿರುವದರಿಂದ ಬಸ್‌ಗಳಲ್ಲಿ ನೂಕುನುಗ್ಗಲು ಉಂಟಾಗುತ್ತಿದೆ.
ಇದರಿಂದ ಶುಕ್ರವಾರ ಮಕ್ಕಳು ಬಸ್ ನೂಕುನುಗ್ಗಲು ನೋಡಿಕೊಂಡು ಸಮೀಪದಲ್ಲಿ ನಿಂತಿದ್ದ ಅದೇ ಗ್ರಾಮಗಳ ಮಾರ್ಗವಾಗಿ ಹೋಗುತ್ತಿದ್ದ ಟ್ರ್ಯಾಕ್ಟರ್‌ನವರಿಗೆ ವಿನಂತಿಸಿ ಅದನ್ನು ಏರಿ ಪ್ರಯಾಣ ಬೆಳೆಸಿದ್ದಾರೆ. ಟ್ರ್ಯಾಕ್ಟರ್‌ನಲ್ಲಿಯೂ ಸಹ ಸಾಕಷ್ಟು ಮಕ್ಕಳು ಏರಿ ಕುಳಿತಿದ್ದು ಕಂಡು ಬಂದಿತು.
ದಿನನಿತ್ಯ ಮಕ್ಕಳಿಗೆ ಈ ತೊಂದರೆ ತಪ್ಪುತ್ತಿಲ್ಲ. ಅವರ ಶಾಲಾ-ಕಾಲೇಜುಗಳ ವೇಳೆಯಲ್ಲಿಯಾದರೂ ಹೆಚ್ಚಿನ ಬಸ್‌ಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಮಕ್ಕಳು ಬಸ್ ಗದ್ದಲದಲ್ಲಿ ಸಿಲುಕಿ ಸಮಸ್ಯೆ ಎದುರಿಸಿದ ಘಟನೆಗಳೂ ನಡೆದಿವೆ. ಆದ್ದರಿಂದ, ಶಾಲಾ ಮಕ್ಕಳಿಗೆ ಅನುಕೂಲವಾಗುವಚಿತೆ ಹೆಚ್ಚುವರಿ ಬಸ್‌ಗಳನ್ನು ಒದಗಿಸಲು ಸಾರಿಗೆ ಇಲಾಖೆ ಮುಂದಾಗಬೇಕೆAದು ಗ್ರಾ.ಪಂ ಸದಸ್ಯ ಸಂತೋಷ ತಾಂದಳೆ ಮನವಿ ಮಾಡಿದ್ದಾರೆ.