ಮೈಸೂರು : ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ದುಡುಕಿ ನಿರ್ಧಾರ ಕೈಗೊಂಡ್ರೆ ರಾಜ್ಯಕ್ಕೆ ಅಪಾಯ ಫಿಕ್ಸ್ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಸಿಎಂ ಬದಲಾವಣೆ ವಿಚಾರದಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು. ಅಧಿಕಾರಿಗಳನ್ನ ವರ್ಗಾವಣೆ ಮಾಡಿದಂತಲ್ಲ. ಸಿದ್ದರಾಮಯ್ಯನಂತಹ ವ್ಯಕ್ತಿ ಮೂರು ಪಕ್ಷದಲ್ಲೂ ಇಲ್ಲ. ಬದಲಾವಣೆ ವಿಚಾರವನ್ನ ಸುಲಭವಾಗಿ ಪರಿಗಣಿಸಬೇಡಿ. ಸಿದ್ದರಾಮಯ್ಯರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ರೆ ರಾಜ್ಯಕ್ಕೆ ಘೋರ ಅನ್ಯಾಯ ಅಲ್ಲದೆ ಇದು ಅಪಾಯಕಾರಿ ಬೆಳವಣಿಗೆ.
ರಾಜ್ಯದಲ್ಲಿ ಧಂಗೆ ಏಳುತ್ತಾರೆ. ನನ್ನ ಅಭಿಪ್ರಾಯದಂತೆ ಸಿದ್ದರಾಮಯ್ಯ ಆರೋಗ್ಯವಾಗಿರುವ ವರೆಗೂ ಸಿಎಂ ಆಗಿ ಮುಂದುವರೆಸಿ ಇಲ್ಲದಿದ್ರೆ ರಾಜ್ಯಕ್ಕೆ ಅಪಾಯ ಗ್ಯಾರಂಟಿ ಎಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದ್ದಾರೆ.


