ನವದೆಹಲಿ:- ಮುಂದಿನ ತಿಂಗಳು ಅಂದ್ರೆ ಡಿಸೆಂಬರ್ 4, 5 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ಭೇಟಿ ಕೊಡಲಿದ್ದಾರೆ.
Advertisement
ಡಿಸೆಂಬರ್ 5ರಂದು ನಡೆಯುವ 23ನೇ ಭಾರತ-ರಷ್ಯಾ ಸಮ್ಮೇಳನದಲ್ಲಿ ಇಬ್ಬರೂ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪುಟಿನ್ ಮತ್ತು ಮೋದಿ ಅವರ ನಡುವಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಎರಡು ದೇಶಗಳ ಸಂಬಂಧಗಳು ಮತ್ತು ಜಾಗತಿಕ ವಿಷಯಗಳ ಬಗ್ಗೆ ಆಳವಾದ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.
ಸದ್ಯ ಜಾಗತಿಕ ರಾಜಕೀಯ ಒತ್ತಡಗಳು ಮತ್ತು ಮಾರ್ಗಸೂಚಿಗಳ ನಡುವೆ, ರಷ್ಯಾ ತೈಲ ಆಮದುಗಳಿಗೆ ಸಂಬಂಧಿಸಿದ ಭಾರತೀಯ ಸರಕುಗಳ ಮೇಲಿನ ಅಮೆರಿಕದ ಸುಂಕಗಳನ್ನು ಎದುರಿಸುತ್ತಿರುವಾಗ ಈ ಭೇಟಿ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.


