ಕಾಲೇಜಿನ ಸ್ಥಿತಿಗತಿಗಳ ಪರಿಶೀಲನೆ

0
S.A. Visit of NAC members to Graduate College
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಇಲ್ಲಿನ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯಕ್ಕೆ ಗುರುವಾರ ಮೂರು ಸದಸ್ಯರುಳ್ಳ ನ್ಯಾಕ್ ಸಮಿತಿ ಭೇಟಿ ನೀಡಿ ಕಾಲೇಜಿನ ಸ್ಥಿತಿಗತಿಗಳನ್ನು ಪರಿಶೀಲಿಸಿತು.

Advertisement

ಬೆಳಿಗ್ಗೆ 9ಕ್ಕೆ ಕಾಲೇಜು ಆವರಣವನ್ನು ಪ್ರವೇಶಿಸಿದ ಸಮಿತಿಯ ಸದಸ್ಯರು ಕಾಲೇಜಿನ ಆಹ್ಲಾದಕರ ವಾತಾವರಣವನ್ನು ಕಂಡು ಮುದಗೊಂಡರು. ಎನ್‌ಸಿಸಿ ವಿದ್ಯಾರ್ಥಿಗಳಿಂದ ಗೌರವ ರಕ್ಷೆಯನ್ನು ಸ್ವೀಕರಿಸಿದ ನ್ಯಾಕ್ ಸಮಿತಿಯ ಸದಸ್ಯರು ಜ್ಯೋತಿ ಬೆಳಗಿಸುವ ಮೂಲಕ ತಮ್ಮ ಕಾರ್ಯಗಳನ್ನು ಪ್ರಾರಂಭಿಸಿದರು.

ಕಾಲೇಜಿನ ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಅವರೊಂದಿಗೆ ಮೊದಲ ಸಂಭಾಷಣೆಯ ಮೂಲಕ ತಮ್ಮ ಪರಿಶೀಲನಾ ಕಾರ್ಯವನ್ನು ಪ್ರಾರಂಭಿಸಿದ ಸದಸ್ಯರು, ನಂತರ ಒಂದೊಂದು ವಿಭಾಗದ ಮುಖ್ಯಸ್ಥರೊಂದಿಗೆ ಆಯಾ ವಿಭಾಗದಲ್ಲಿ ಆಗಿರುವ ಪ್ರಗತಿ ವರದಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿದರು.

ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ ಸಮಿತಿಯ ಸದಸ್ಯರು, ಕಾಲೇಜಿನಲ್ಲಿನ ಕುಂದುಕೊರತೆಗಳನ್ನು, ವಿದ್ಯಾಭ್ಯಾಸದ ಕ್ರಮಗಳನ್ನು ವಿದ್ಯಾರ್ಥಿಗಳಿಂದ ಕೇಳಿ ತಿಳಿದುಕೊಂಡರು. ಸಮಿತಿಯ ಸದಸ್ಯರ ಜೊತೆ ಸಭೆ ನಡೆಸಿ ಕಾಲೇಜು ಅಭಿವೃದ್ಧಿಗೆ ಅವರು ಕೈಗೊಳ್ಳಬಹುದಾದ ಕ್ರಮಗಳನ್ನು ತಿಳಿದುಕೊಂಡು ತಮ್ಮ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ವೀರಾಪೂರ, ಆಡಳಿತ ಮಂಡಳಿ ಸದಸ್ಯ ವೀರಯ್ಯ ವಸ್ತçದ, ಸದಸ್ಯರಾದ ಸೋಮಣ್ಣ ಹರ್ಲಾಪೂರ, ಬಿ.ಎಫ್. ಚೇಗರೆಡ್ಡಿ ಉಪಸ್ಥಿತರಿದ್ದರು.

ನ್ಯಾಕ್ ಸಮಿತಿಯ ಸದಸ್ಯರಾದ ಡಾ. ಜಯಪ್ರಕಾಶ ತ್ರಿವೇದಿ, ಡಾ. ಅಖಿಲ ಅಹ್ಮದ ಮತ್ತು ಉಷಾ ಮುಕುಂದನ್ ಅವರು ಮಧ್ಯಾಹ್ನ ಕಾಲೇಜಿನ ಹಿಂದಿನ ವಿದ್ಯಾರ್ಥಿಗಳೊಂದಿಗೆ ಮತ್ತು ಇಂದಿನ ವಿದ್ಯಾರ್ಥಿಗಳ ಪಾಲಕರೊಂದಿಗೆ ಸಂವಾದ ನಡೆಸಿ ಕಾಲೇಜಿನ ಪ್ರಗತಿ ನೋಟದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕಾಲೇಜಿನ ಹಿಂದಿನ ವಿದ್ಯಾರ್ಥಿಗಳಾದ ಡಾ. ಆರ್.ಕೆ. ಗಚ್ಚಿನಮಠ, ಡಿ.ಎ. ಅರವಟಗಿಮಠ, ಅರುಣ ಬಿ. ಕುಲಕರ್ಣಿ, ಎಂ.ಎಸ್. ದಢೇಸೂರಮಠ, ನಿವೃತ್ತ ಪ್ರಾಚಾರ್ಯ ಸಿ.ಐ. ಮರಡಿಮಠ, ಉಪನ್ಯಾಸಕರಾದ ಎಸ್.ಎಚ್. ಕುಲಕರ್ಣಿ, ಎನ್.ಎಸ್. ಮಾಸರೆಡ್ಡಿ ಇನ್ನೂ ಮುಂತಾದವರಿದ್ದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ ಸದಸ್ಯರು ತೃಪ್ತ ಭಾವನೆಯೊಂದಿಗೆ ಮರಳಿದರು.

ಮೊದಲ ದಿನ ಅವರು ಜೀವಶಾಸ್ತ್ರ, ಸಸ್ಯಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ, ಭೂಗೋಳ ಶಾಸ್ತ್ರ, ವಾಣಿಜ್ಯ ಮತ್ತು ಇಂಗ್ಲೀಷ್ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಿ, ಈ ಎಲ್ಲ ವಿಷಯಗಳ ಪ್ರಯೋಗಾಲಯಗಳ ಜೊತೆಗೆ ಭಾಷಾ ಪ್ರಯೋಗಾಲಯ, ಕಾಲೇಜು ಗ್ರಂಥಾಲಯ ಮತ್ತು ಬಾಲಿಕೆಯರ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಗಮನಿಸಿದರು.

 


Spread the love

LEAVE A REPLY

Please enter your comment!
Please enter your name here