HomeIndia Newsಶಬರಿಮಲೆ: ಇಂದಿನಿಂದ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಮಂಡಲ ಪೂಜೆ: ಡಿ. 26ರ ತನಕ ಮಾತ್ರ ದರ್ಶನಕ್ಕೆ...

ಶಬರಿಮಲೆ: ಇಂದಿನಿಂದ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಮಂಡಲ ಪೂಜೆ: ಡಿ. 26ರ ತನಕ ಮಾತ್ರ ದರ್ಶನಕ್ಕೆ ಅವಕಾಶ!

For Dai;y Updates Join Our whatsapp Group

Spread the love

ತಿರುವನಂತಪುರಂ:- ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಇಂದಿನಿಂದ ಆರಂಭವಾಗಲಿದ್ದು, ಡಿ.25 ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಶಬರಿಮಲೆ ದೇವಸ್ಥಾನವು ಪ್ರತಿವರ್ಷ ಮಂಡಲ ಪೂಜೆಗಾಗಿ ತೆರೆಯುತ್ತದೆ. ಇಂದಿನಿಂದ ವಾರ್ಷಿಕ ತೀರ್ಥಯಾತ್ರೆಯ ದರ್ಶನ ಪ್ರಾರಂಭವಾಗಿದೆ. ಇಂದಿನಿಂದ ಕೇರಳದ ಶಬರಿಮಲೆಯಲ್ಲಿ ಮಂಡಲಪೂಜೆ, ದರ್ಶನ ಆರಂಭವಾಗಿದೆ.

ನವೆಂಬರ್ 29ರವರೆಗೆ ಶಬರಿಮಲೆಯಲ್ಲಿ ದರ್ಶನಕ್ಕಾಗಿ ವರ್ಚುವಲ್ ಕ್ಯೂ ಬುಕ್ಕಿಂಗ್ ಪೂರ್ಣಗೊಂಡಿದೆ. ದಿನಕ್ಕೆ 70,000 ಸಂದರ್ಶಕರಿಗೆ ವರ್ಚುವಲ್ ಕ್ಯೂ ಬುಕಿಂಗ್ ಸೌಲಭ್ಯವು ಈಗ ಲಭ್ಯವಿದೆ. 10 ಸಾವಿರ ಜನರಿಗೆ ಸ್ಪಾಟ್ ಬುಕ್ಕಿಂಗ್ ಸೌಲಭ್ಯ ಇರಲಿದೆ ಎಂದು ಶಬರಿಮಲೆ ದೇವಸ್ವಂ ಮಂಡಳಿ ಮಾಹಿತಿ ನೀಡಿದೆ.

ಸುಮಾರು 60,000 ಜನರು ವರ್ಚುವಲ್ ಸರತಿ ವ್ಯವಸ್ಥೆಯ ಮೂಲಕ ದರ್ಶನವನ್ನು ಪಡೆಯುತ್ತಾರೆ. ಇನ್ನೂ 10,000 ಜನರು ಸ್ಥಳದಲ್ಲೇ ಬುಕ್ಕಿಂಗ್ ಮಾಡಲು ಅನುಮತಿಸಲಾಗಿದೆ.

ಇನ್ನೂ ಈ ಕುರಿತು ಶಬರಿಮಲೆ ದೇವಸ್ಥಾನ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಮಾತನಾಡಿ, ತೀರ್ಥೋದ್ಭವದ ಆರಂಭದಿಂದ ಪ್ರತಿದಿನ ಬೆಳಗ್ಗೆ 3 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 11 ರವರೆಗೆ ದರ್ಶನಕ್ಕೆ ನೀಡಲಾಗುವುದು. ಇದರಿಂದಾಗಿ ಭಕ್ತರ ನುಕುನುಗ್ಗಲನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಸ್ಥಳದಲ್ಲಿಯೇ ಬುಕ್ಕಿಂಗ್ ಮಾಡಲು ಪಂಪಾ, ಎರುಮೇಲಿ ಮತ್ತು ವಂಡಿಪೆರಿಯಾರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಲವಾರು ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಸ್ಪಾಟ್ ಬುಕಿಂಗ್ ಆಯ್ಕೆ ಮಾಡಿಕೊಳ್ಳುವ ಭಕ್ತರು ತಮ್ಮ ಗುರುತಿನ ಆಧಾರ್ ಕಾರ್ಡ್‌ನ್ನು ತೋರಿಸುವುದು ಕಡ್ಡಾಯವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!