ಬೆಂಗಳೂರು:- ಪ್ರಸ್ತಕ ಸಾಲಿನ ಮೂರು ತಿಂಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಈ ಮೂಲಕ ರಾಷ್ಟ್ರದಲ್ಲೇ ಅತ್ಯಂತ ಸುರಕ್ಷಿತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೇರೆ ನಗರಗಳಿಗೆ ಹೊಸ ಹೋಲಿಕೆ ಮಾಡಿದರೆ ಕಳೆದ ಸಾಲಿನ 3 ತಿಂಗಳಲ್ಲಿ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಈ ಮೂಲಕ ರಾಷ್ಟ್ರದಲ್ಲೇ ಅತ್ಯಂತ ಸುರಕ್ಷಿತ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿ ನೋಡುವುದಾದರೆ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಶೇಕಡ 12ರಷ್ಟು ಇಳಿಕೆ ಕಂಡು ಬಂದಿದೆ. ಸೈಬರ್ ವಂಚನೆ ಪ್ರಕರಣಗಳಲ್ಲಿ 39% ರಷ್ಟು ಕಡಿಮೆಯಾಗಿದೆ. ಡಕಾಯಿತಿ ಶೇ. 71 ರಷ್ಟು, ದರೋಡೆ ಶೇ. 73 ರಷ್ಟು, ಸರಗಳ್ಳತನ ಶೇ. 57 ರಷ್ಟು ಕಡಿಮೆಯಾಗಿದೆ.
ಯೂನಿವರ್ಸಿಟಿ ಆಫ್ ಹೈದರಾಬಾದ್ ನಡೆಸಿದ ಸರ್ವೇಯಲ್ಲಿ ಬೆಂಗಳೂರು ಅತಂತ್ಯ ಸುರಕ್ಷಿತ ನಗರ ಎಂದು ಬಿರುದು ಪಡೆದುಕೊಂಡಿದ್ದರೆ, ಕೋಲ್ಕತ್ತಾ ಅಸುರಕ್ಷಿತ ನಗರ ಎಂಬ ಕುಖ್ಯಾತಿಗೆ ಭಾಜನವಾಗಿದೆ ಎಂದು ಆಂಗ್ಲ ಪತ್ರಿಕೆಯಲ್ಲಿ ಬಂದಿರುವ ವರದಿ ಆಧರಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.