ಎಸ್‌ಎಸ್‌ಕೆ ಸಮಾಜದಿಂದ ಸಹಸ್ರಾರ್ಜುನ ಜಯಂತ್ಯುತ್ಸವ

0
Sahasrarjuna Jayantyutsava by SSK Samaj
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ಎಸ್‌ಎಸ್‌ಕೆ ಸಮಾಜದ ವತಿಯಿಂದ ನಗರದಲ್ಲಿ ಶುಕ್ರವಾರ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ಆಚರಿಸಲಾಯಿತು. ಜಯಂತ್ಯುತ್ಸವದ ಅಂಗವಾಗಿ ನಗರದ ಹಳೇ ಸರಾಫ್ ಬಜಾರ್‌ನಲ್ಲಿರುವ ಅಂಬಾಭವಾನಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ಸಹಸ್ರಾರ್ಜುನ ಮಹಾರಾಜರನ್ನು ತೊಟ್ಟಿಲೋತ್ಸವ ನೆರವೇರಿಸಿ ಅಂಬಾಭವಾನಿಗೆ ಮಂಗಳಾರತಿ ನೆರವೇರಿಸಲಾಯಿತು.

Advertisement

ನಗರದ ಹುಬ್ಬಳ್ಳಿಯ ರಸ್ತೆಯ ವಿಠ್ಠಲಾರೂಡ ಸಮುದಾಯ ಭವನದಲ್ಲಿ ಗದಗ-ಬೆಟಗೇರಿ ಎಸ್‌ಎಸ್‌ಕೆ ಸಮಾಜದ ವತಿಯಿಂದ ಸಹಸ್ರಾರ್ಜುನ ಮಹಾರಾಜರ ಜಯಂತಿ ಅಂಗವಾಗಿ ಜಂಟಿಯಾಗಿ ಬೈಕ್ ರ‍್ಯಾಲಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಚಾಲನೆ ನೀಡಿದರು.

ಬೈಕ್ ರ‍್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವದ ಅಂಗವಾಗಿ ಬೆಳ್ಳಿ ಮೂರ್ತಿ ಹಾಗೂ ಬೃಹತ್ ಭಾವಚಿತ್ರದ ಮೆರವಣಿಯಲ್ಲಿ ಸಮಾಜದ ನಾಯಕರು ಭಾಗವಹಿಸಿದ್ದರು. ಜಗದಂಬಾ ದೇವಸ್ಥಾನದ ಹತ್ತಿರ ರಾಜಕುಮಾರ ಮೆಲೋಡಿ ಇವೆಂಟ್ಸ್ ಹಾಗೂ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ಮಹಿಳಾ ಮಂಡಳದ ಅಧ್ಯಕ್ಷೆ ಉಮಾ ಬೇವಿನಕಟ್ಟಿ ಹಾಗೂ ಸಮಾಜ ಬಾಂಧವರು ಸಹಸ್ರಾರ್ಜುನ ಮಹಾರಾಜರ ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಫಕೀರಸಾ ಬಾಂಡಗೆ ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥಸಾ ಸೂಳಂಕಿ, ಬೆಟಗೇರಿ ಸಮಾಜದ ದಸರಾ ಕಮಿಟಿಯ ಚೇರಮನ್ ಸುರೇಶ ಮೇರವಾಡೆ, ಹೀರಾಸಾ ಬಾಕಳೆ, ಎನ್.ಆರ್. ಖಟವಟೆ, ಸುರೇಶಕುಮಾರ ಬದಿ, ಮಾರುತಿ ಪವಾರ, ಅನಿಲ್ ಖಟವಟೆ, ಶ್ರೀನಿವಾಸ ಬಾಂಡಗೆ, ಗಣಪತಿ ಜಿತೂರಿ, ಗಂಗಾಧರ ಹಬೀಬ, ಮಾಧೂಸಾ ಬದಿ, ಮೋಹನ ಪವಾರ, ಪ್ರದೀಪ ಖಟವಟೆ, ಸುಧೀರ ಕಾಟಿಗರ, ಆರ್.ಟಿ.ಕಬಾಡಿ, ರಾಮಚಂದ್ರ ಶಿದ್ಲಿಂಗ, ಭೀಮಾ ಕಾಟಿಗರ, ಬಾಬು ಬಾಕಳೆ, ಕಿಶನ ಮೇರವಾಡೆ, ಜಿ.ಎನ್. ಹಬೀಬ, ಶ್ರೀಕಾಂತ ಬಾಕಳೆ ಇದ್ದರು.

ಬೆಟಗೇರಿಯ ಮುನ್ನೂಬಾಯಿ ಈಶ್ವರಸಾ ಖೋಡೆ ಕಲ್ಯಾಣ ಮಂಟಪದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.


Spread the love

LEAVE A REPLY

Please enter your comment!
Please enter your name here