ಸೌತ್ ಬ್ಯೂಟಿ ನಟಿ ಸಾಯಿ ಪಲ್ಲವಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಳೆದು ತೂಗಿ ಪಾತ್ರಗಳ ಆಯ್ಕೆ ಮಾಡಿಕೊಳ್ಳುವ ನಟಿ ಇದೀಗ ಯಲ್ಲಮ್ಮ ಸಿನಿಮಾದಿಂದ ಏಕಾಏಕಿ ಹೊರ ಬಂದಿದ್ದಾರೆ.
‘ಯಲ್ಲಮ್ಮ’ ಹೆಸರಿನ ಸಿನಿಮಾದಲ್ಲಿ ನಟಿಸಲು ಸಾಯಿ ಪಲ್ಲವಿ ಒಪ್ಪಿಕೊಂಡಿದ್ದರು. ಈ ಹಿಂದೆ ‘ಬಲಗಂ’ ಅಂಥಹಾ ಅದ್ಭುತ ಸಿನಿಮಾ ನಿರ್ದೇಶಿಸಿದ್ದ ವೇಣು ಯಲದಂಡಿ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಕತೆ ಇಷ್ಟವಾಗಿ ಸಾಯಿ ಪಲ್ಲವಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದರು. ಸಿನಿಮಾಕ್ಕೆ ದಿಲ್ ರಾಜು ಬಂಡವಾಳ ಹೂಡುತ್ತಿದ್ದು, ಸಿನಿಮಾದಲ್ಲಿ ನಾಯಕನಾಗಿ ‘ಜಯಂ’ ಖ್ಯಾತಿಯ ನಿತಿನ್ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು ಇನ್ನೇನ್ನೂ ಶೂಟಿಂಗ್ ಶುರುವಾಗಬೇಕಿತು. ಆದರೆ ಸಾಯಿ ಪಲ್ಲವಿ ಏಕಾಏಕಿ ಸಿನಿಮಾದಿಂದ ಹೊರ ಬಂದಿದ್ದು ಅವರ ಅಭಿಮಾನಿಗಳಿಗೆ ಬೇಸರ ನೀಡಿದೆ.
‘ಯಲ್ಲಮ್ಮ’ ಸಾಮಾಜಿಕ ಕಥಾಹಂದರ ಇರುವ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ನಾಯಕಿಯದ್ದೇ ಪ್ರಧಾನ ಪಾತ್ರ. ಅದೇ ಕಾರಣಕ್ಕೆ ಸಿನಿಮಾ ತಂಡ ಸಾಯಿ ಪಲ್ಲವಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದರು. ಸಾಯಿ ಪಲ್ಲವಿಗೂ ಸಹ ಕತೆ ಬಹಳ ಇಷ್ಟವಾಗಿತ್ತು. ನಿತಿನ್ ಜೊತೆಗೆ ಮೊದಲ ಬಾರಿಗೆ ನಟಿಸಲು ಒಪ್ಪಿಕೊಂಡಿದ್ದರು. ಆದರೆ, ಡೇಟ್ಸ್ ಸಮಸ್ಯೆಯಿಂದಾಗಿ ಸಾಯಿ ಪಲ್ಲವಿ ಅನಿವಾರ್ಯವಾಗಿ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಸಾಯಿ ಪಲ್ಲವಿ ‘ರಾಮಾಯಣ’ದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಇನ್ನೂ ಹಲವು ಸಿನಿಮಾಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಡೇಟ್ಸ್ ಸಮಸ್ಯೆ ಎದುರಾಗಿದ್ದು ‘ಯಲ್ಲಮ್ಮ’ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಚಿತ್ರತಂಡ ಸಾಯಿ ಪಲ್ಲವಿ ಜಾಗಕ್ಕೆ ‘ಯಲ್ಲಮ್ಮ’ ಚಿತ್ರದಲ್ಲಿ ನಟಿಸಲು ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರನ್ನು ಆಯ್ಕೆ ಮಾಡಿದೆ.