ವಿಜಯಸಾಕ್ಷಿ ಸುದ್ದಿ, ಗದಗ : ಭವಿಷ್ಯತ್ಕಾಲದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಸಾಯಿಬಾಬ ಅವರು ಭಕ್ತರಿಗೆ ಮುನ್ಸೂಚನೆಗಳನ್ನು ಸೂಚ್ಯವಾಗಿ ತಿಳಿಸುತ್ತಿದ್ದರು. ಭಕ್ತರ ಸಂಕಲ್ಪಗಳಿಗೆ ಬಾಬಾ ಅವರ ಅನುಗ್ರಹ ಇದ್ದರೆ ಮಾತ್ರ ಈಡೇರಲು ಸಾಧ್ಯ. ಇಲ್ಲವಾದರೆ ಸೇವೆ-ಪ್ರಯತ್ನ ಮುಂದುವರೆಸಿ ಎಂಬುದಾಗಿರುತ್ತದೆ ಎಂದು ಗದುಗಿನ ಧಾರ್ಮಿಕ ಚಿಂತಕ ಡಾ. ಎಸ್.ಬಿ. ಶೆಟ್ಟರ ಹೇಳಿದರು.
ಅವರು ಗದಗ ಹಾತಲಗೇರಿ ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯಿಂದ ಗುರುಪೂರ್ಣಿಮೆ ಅಂಗವಾಗಿ ಜುಲೈ 20ರವರೆಗೆ ನಡೆಯಲಿರುವ ಶ್ರೀ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆ-4ರಲ್ಲಿ ಮಾತನಾಡಿದರು.
ಬಾಬಾ ಅವರ ಕಣ್ಣು ತಪ್ಪಿಸಿ ನಾವು ಏನನ್ನೂ ಮಾಡಲಾಗದು. ಹಾಗೇನಾದರೂ ಮಾಡಿದ್ದೇ ಆದರೆ ಅದು ಅವರಿಗೆ ತಿಳಿದು ಅಪರೋಪಕ್ಷವಾಗಿ ತಪ್ಪು ಮಾಡಿದವರಿಗೆ ಜ್ಞಾನೋದಯ ಆಗುವಂತೆ ಮಾಡಿ ಅವರನ್ನು ಜಾಗ್ರತಗೊಳಿಸುತ್ತಿದ್ದರು ಎಂದರು.
ಸಾಯಿಬಾಬಾ ಧುನಿ ನಿರ್ಮಾಣಕ್ಕೆ ತಲಾ 25 ಸಾವಿರ ರೂ.ಗಳನ್ನು ದೇಣಿಗೆ ನೀಡಿದ ಪ್ರಶಾಂತ ನಾಯ್ಕರ್, 11 ಸಾವಿರ ರೂ.ಗಳನ್ನು ದೇಣಿಗೆ ನೀಡಿದ ಶಾಂತಾಬಾಯಿ ಕಾರಜೋಳ ಹಾಗೂ ಪುಷ್ಪಾವತಿ ಬಸವರಾಜ ಬಳ್ಳಾರಿ ಪರಿವಾರವನ್ನು ಮತ್ತು ಪ್ರವಚನದ ಪ್ರಸಾದ ಸೇವೆ ವಹಿಸಿಕೊಂಡಿದ್ದ ಪ್ರಶಾಂತ ನಾಯ್ಕರ್, ರುದ್ರಪ್ಪ ಚಂದ್ರಪ್ಪ ಅರಳಿ, ಚಂದ್ರುಗೌಡ ಸಂಗನಗೌಡ ಕಲ್ಲನಗೌಡ್ರ ಪರಿವಾರವನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯ ಅಧ್ಯಕ್ಷ ಮಹೇಶ ತಲೇಗೌಡ್ರ ಸ್ವಾಗತಿಸಿದರು ಕಾರ್ಯದರ್ಶಿ ರವಿ ಚಿಂಚಲಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.
ಜೀವನದಲ್ಲಿ ಬರುವ ಎಲ್ಲ ಪರೀಕ್ಷೆ, ಸವಾಲುಗಳನ್ನು ಸಾಧಿಸಲು ಸಾಯಿಬಾಬಾ ಅವರ ಅನುಗ್ರಹ ಇದ್ದರೆ ಮಾತ್ರ ಅವುಗಳು ಈಡೇರುವವು. ಅಚಲವಾಗಿ ನಂಬಿರುವ, ಶೃದ್ಧೆ-ಭಕ್ತಿಯಿಂದ ನಡೆದುಕೊಳ್ಳುವ ಪರಿಶುದ್ಧ ಕಾಯಕ ಮಾಡಿ ಜೀವನ ಮಾಡುವ ಭಕ್ತರನ್ನು ಬಾಬಾ ಅವರು ಸದಾಕಾಲ ಸಂರಕ್ಷಿಸುತ್ತಿದ್ದರು ಎಂಬುದನ್ನು ಅವರ ಚರಿತ್ರೆಯ ಪುಟಗಳಿಂದ ತಿಳಿಯಬಹುದಾಗಿದೆ ಎಂದು ಡಾ. ಎಸ್.ಬಿ. ಶೆಟ್ಟರ ಹೇಳಿದರು.
Advertisement