ಚಾಕು ಇರಿತಕ್ಕೆ ಒಳಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಸೈಫ್ ಅಲಿ ಖಾನ್ ಇಂದು ಬಿಡುಗಡೆಯಾಗಿದ್ದು ಮನೆ ಸೇರಿದ್ದಾರೆ. ಎರಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸೈಫ್ ಇದೀಗ ಕೊಂಚ ಸುಧಾರಿಸಿಕೊಂಡಿದ್ದು ಹೀಗಾಗಿ ಬಾರಿ ಬಿಗಿ ಭದ್ರತೆಯಲ್ಲಿ ಮನೆಗೆ ತೆರಳಿದ್ದಾರೆ.
ಜನವರಿ 16ರಂದು ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ಆಗಂತುಕ 6 ಬಾರಿ ಚಾಕು ಇರಿದಿದ್ದ. ಚಾಕು ಇರಿತದ ದಾಳಿಯಿಂದ ಸೈಫ್ ಅಲಿ ಖಾನ್‌ಗೆ ತೀವ್ರ ಗಾಯಗೊಂಡಿದ್ದರು. ತಕ್ಷಣವೇ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಸೈಫ್ ಅಲಿ ಖಾನ್ ಅವರಿಗೆ 2 ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಇಂದು ವೈದ್ಯರ ಸಲಹೆ ಮೇರೆಗೆ ಸೈಫ್ ಅಲಿ ಖಾನ್ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸೈಫ್ ಅಲಿ ಖಾನ್ ಅವರಿಗೆ ವೈದ್ಯರು ಇನ್ನು 1 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಬೇಕು ಎಂದು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಹೆಚ್ಚು ಜನರನ್ನ ಅವರು ಭೇಟಿಯಾಗಬಾರದು. ವಿಸಿಟರ್ಸ್‌ಗಳಿಂದ ಇನ್ಫೆಕ್ಷನ್ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೈಫ್ ಅಲಿ ಖಾನ್ ಅವರನ್ನ ಕುಟುಂಬ ಸದಸ್ಯರು ಭಾವುಕರಾಗಿ ಬರಮಾಡಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ತಾಯಿ ಶರ್ಮಿಳಾ ಟಾಗೋರ್, ಪತ್ನಿ ಕರೀನಾ ಕಪೂರ್ ಅವರು ಜೊತೆಗಿದ್ದರು.