ದರೋಡೆಕೋರದ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ನಟ ಸೈಪ್ ಅಲಿ ಖಾನ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಎರಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸೈಫ್ ಮನೆಗೆ ತೆರಳಿದ್ದು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಯಿಂದಿ ಡಿಸ್ಚಾರ್ಜ್ ಆಗುವ ಮುನ್ನ ಸೈಫ್ ತನ್ನ ಜೀವ ಉಳಿಸಿದ ಆಟೋ ಚಾಲಕನನ್ನು ಭೇಟಿಯಾಗಿ ಧನ್ಯವಾದ ಹೇಳಿದ್ದಾರೆ.
ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾಜ್ ಆಗುವ ಮುನ್ನ ಆಟೋ ಚಾಲಕ ಭಜನ್ ಸಿಂಗ್‌ರನ್ನು ಸೈಫ್ ಭೇಟಿಯಾಗಿ ಧನ್ಯವಾದ ಹೇಳಿದ್ದಾರೆ. ಗಾಯಗೊಂಡಿದ್ದ ತಮ್ಮನ್ನು ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕನನ್ನು ಕರೆಸಿ ಧನ್ಯವಾದ ತಿಳಿಸಿದ್ದಲ್ಲದೇ, ಮುಂದೆ ನಿಮಗೆ ಏನೇ ಸಹಾಯ ಬೇಕೆಂದರು ತಮ್ಮನ್ನು ಸಂಪರ್ಕಿಸುವಂತೆ ಸೈಫ್ ತಿಳಿಸಿದ್ದಾರಂತೆ.
ಈ ಭೇಟಿಯ ಬಳಿಕ ಭಜನ್ ಸಿಂಗ್ ರಾಣ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ಇಂದು ನನ್ನನ್ನು ಆಹ್ವಾನಿಸಿದ್ದರು. ಅದರಿಂದ ನನಗೆ ತುಂಬ ಖುಷಿ ಆಯಿತು. ವಿಶೇಷ ಏನೂ ಇಲ್ಲ. ಇದೊಂದು ಸಾಮಾನ್ಯ ಭೇಟಿ. ಬೇಗ ಗುಣಮುಖರಾಗಲಿ ಅಂತ ಪಾರ್ಥಿಸಿದ್ದೆ. ಇಂದು ಕೂಡ ಅದೇ ರೀತಿ ಪ್ರಾರ್ಥನೆ ಮಾಡಿದ್ದೇನೆ ಎಂದು ಅವರಿಗೆ ನಾನು ಹೇಳಿದೆ’ ಎಂದಿದ್ದಾರೆ.