ಬಾಲಿವುಡ್ನ ಸ್ಟಾರ್ ನಟ ಸೈಪ್ ಅಲಿ ಖಾನ್ ಚಾಕು ಇರಿತದ ಪ್ರಕರಣದ ತನಿಖೆಗೆ ಏಳು ತಂಡಗಳನ್ನು ರಚಿಸಲಾಗಿದೆ. ಪ್ರಕರಣ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ಮನೆಗೆ ನುಗ್ಗಿ ನಟನಿಗೆ ಇರಿದಿದ್ದ ಹಂತಕನನ್ನು ಅರೆಸ್ಟ್ ಮಾಡಲಾಗಿದೆ.
ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದಿದ್ದ ದಾಳಿಕೋರನನ್ನು ನಿನ್ನೆ ತಡರಾತ್ರಿ ಮುಂಬೈ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸೈಫ್ ಮೇಲಿನ ಅಟ್ಯಾಕ್ ಬೆನ್ನಲ್ಲೇ ದಾಳಿಕೋರನ ಹುಡುಕಲು ಮುಂಬೈ ಪೋಲಿಸರು 20 ತಂಡ ರಚಿಸಿ ಬಲೆ ಬೀಸಿದ್ದರು. ಕೊನೆಗೂ ದಾಳಿಕೋರ ಪೋಲೀಸರ ಅತಿಥಿಯಾಗಿದ್ದಾನೆ.
ಇದು ದರೋಡೆ ಮಾಡಲು ಈ ಕೃತ್ಯ ಎಸಗಿದ್ದ ಅಥವಾ ಕೊಲೆ ಮಾಡುವ ಹಿನ್ನಾರ ಇತ್ತಾ? ಎಂಬುದನ್ನು ತಿಳಿಯಲು ವಿವಿಧ ರೀತಿಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಬಂಧಿತನಾಗಿರುವ ಆರೋಪಿ ಈ ಹಿಂದೆ ಶಾರುಖ್ ಖಾನ್ ಮನೆ ಮುಂದೆ ಕೂಡ ಕಾಣಿಸಿಕೊಂಡಿರೋದು ಕೂಡ ಬೆಳಕಿಗೆ ಬಂದಿದೆ.