ದುಬೈನಲ್ಲಿ ನಡೆದ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2025 ದ ಮೊದಲ ದಿನದಂದು ತೆಲುಗು ಹಾಗೂ ಕನ್ನಡ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಕನ್ನಡದಲ್ಲಿ ಮ್ಯಾಕ್ಸ್ ಸೇರಿದಂತೆ ಹಲವು ಸಿನಿಮಾಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೋಂಡಿವೆ.
‘ಮ್ಯಾಕ್ಸ್’ ಸಿನಿಮಾ ನಟನೆಗೆ ಕಿಚ್ಚ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ, ಉಪೇಂದ್ರ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಸಿಕ್ಕಿದೆ.ಆದರೆ ಸಿನಿಮಾ ಕೆಲಸಗಳ ಕಾರಣಕ್ಕೆ ಸುದೀಪ್ ದುಬೈಗೆ ಹೋಗಿಲ್ಲ. ಇನ್ನು, ‘ಯುಐ’ ನಿರ್ದೇಶನಕ್ಕೆ ಉಪೇಂದ್ರ ಅವರು ಅತ್ಯುತ್ತಮ ನಿರ್ದೇಶಕ ಅವಾರ್ಡ್ ಪಡೆದಿದ್ದಾರೆ. ‘02’ ನಟನೆಗೆ ಆಶಿಕಾ ರಂಗನಾಥ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ‘ಭೀಮ’ ಸಿನಿಮಾ ನಟನೆಗೆ ದುನಿಯಾ ವಿಜಯ್ಗೆ ಅತ್ಯುತ್ತಮ ನಟ (ಕ್ರಿಟಿಕ್ಸ್) ಅವಾರ್ಡ್ ದೊರೆತಿದೆ. ‘ಕೃಷ್ಣಂ ಪ್ರಣಯ ಸಖಿ’ ಅತ್ಯುತ್ತಮ ಸಿನಿಮಾ ಅವಾರ್ಡ್ ಗೆದ್ದಿದೆ.
ಅತ್ಯುತ್ತಮ ಸಂಗೀತ ಸಂಯೋಜನೆ: ಬಿ. ಅಜನೀಶ್ ಲೋಕನಾಥ್ (ಮ್ಯಾಕ್ಸ್)
ಅತ್ಯುತ್ತಮ ಹಾಸ್ಯನಟ: ಜಾಕ್ ಸಿಂಗಂ (ಭೀಮ)
ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ: ಸಂದೀಪ್ ಸುಂಕದ್ (ಶಾಖಾಹಾರಿ)
ಅತ್ಯುತ್ತಮ ಚೊಚ್ಚಲ ನಟ- ಸಮರ್ಜಿತ್ ಲಂಕೇಶ್ (ಗೌರಿ)
ಭರವಸೆ ಮೂಡಿಸಿದ ಹೊಸ ಪ್ರತಿಭೆ- ಸನ್ಯಾ ಅಯ್ಯರ್ (ಗೌರಿ)
ಅತ್ಯುತ್ತಮ ಚೊಚ್ಚಲ ನಟಿ – ಅಂಕಿತಾ ಅಮರ್ (ಇಬ್ಬನಿ ತಬ್ಬಿದಾ ಇಳೆಯಲಿ)
ಅತ್ಯುತ್ತಮ ಸಾಂಗ್ ಡಿಸೈನ್- ಇಮ್ರಾನ್ ಎಸ್ ಸರ್ಧಾರಿಯಾ
ಅತ್ಯುತ್ತಮ ಛಾಯಾಗ್ರಹಣ: ಶ್ರೀವತ್ಸನ್ ಸೆಲ್ವರಾಜನ್ (ಇಬ್ಬನಿ ತಬ್ಬಿದ ಇಳೆಯಲಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಐಶ್ವರ್ಯ ರಂಗರಾಜನ್
ಕನ್ನಡದ ಅತ್ಯುತ್ತಮ ಗೀತರಚನೆಕಾರ – ವಿ. ನಾಗೇಂದ್ರ ಪ್ರಸಾದ್
ಅತ್ಯುತ್ತಮ ಗಾಯಕ – ಜಸ್ಕರನ್



