ಸಕ್ರೆಬೈಲು: ಜನಪ್ರಿಯ ಬಾಲಣ್ಣ ಆನೆಯ ಬಲ ಕಿವಿ ಕತ್ತರಿಸಿದ ವೈದ್ಯರು; ತುರ್ತು ಚಿಕಿತ್ಸೆ!

0
Spread the love

ಸಕ್ರೆಬೈಲು:- ಸಕ್ರೆಬೈಲು ಆನೆ ಶಿಬಿರದ ಜನಪ್ರಿಯ ಆನೆಗಳಲ್ಲಿ ಒಂದಾದ ಬಾಲಣ್ಣ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ, ಅದರ ಬಲ ಕಿವಿಯಲ್ಲಿ ಉಂಟಾದ ಗ್ಯಾಂಗ್ರಿನ್ ಸೋಂಕಿನಿಂದಾಗಿ ವೈದ್ಯರ ತಂಡವು ಕಿವಿಯ ಭಾಗವನ್ನು ಕತ್ತರಿಸಿ ತೆಗೆದಿದೆ.

Advertisement

ಆನೆಯ ಬಲ ಕಿವಿ ಸಂಪೂರ್ಣ ಕಪ್ಪಾಗಿ, ಕೀವು ಸೋರುತ್ತಿದ್ದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಬೆಂಗಳೂರಿನಿಂದ ವಿಶೇಷ ತಜ್ಞರ ತಂಡ ಸಕ್ರೆಬೈಲು ಶಿಬಿರಕ್ಕೆ ಆಗಮಿಸಿತ್ತು. ಡಾ. ಚೆಟ್ಟು ಯಪ್ಪ ಹಾಗೂ ಡಾ. ರಮೇಶ್ ಅವರ ನೇತೃತ್ವದ ಐವರ ವೈದ್ಯರ ತಂಡವು ಆನೆಯ ಆರೋಗ್ಯ ಪರಿಶೀಲಿಸಿ ತುರ್ತು ಚಿಕಿತ್ಸೆ ಆರಂಭಿಸಿತು.

ಸೋಂಕು ತೀವ್ರವಾಗಿದ್ದು ಗ್ಯಾಂಗ್ರಿನ್ ದೇಹದ ಇತರ ಭಾಗಗಳಿಗೆ ಹರಡುವ ಸಾಧ್ಯತೆ ಇದ್ದುದರಿಂದ ತಜ್ಞರು ಶಸ್ತ್ರಚಿಕಿತ್ಸೆ ನಡೆಸಿ ಆನೆಯ ಬಲ ಕಿವಿಯನ್ನು ಕತ್ತರಿಸಿದ್ದಾರೆ. ಪ್ರಸ್ತುತ ಬಾಲಣ್ಣನಿಗೆ ಶಿಬಿರದಲ್ಲೇ ನಿರಂತರ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here