ಹಾವೇರಿ:- ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಹಾನಗಲ್ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ 10 ಹಸುಗಳನ್ನು ರಕ್ಷಿಣೆ ಮಾಡಿದ್ದಾರೆ.
ಅಕ್ರಮ ಗೋ ಮಾಂಸ ಮಾರಾಟದ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ವೇಳೆ ಖಸಾಯಿ ಖಾನೆಯಲ್ಲಿ ಹಾಲು ನೀಡುವ 15 ಹಸುಗಳ ಮಾರಾಣಹೋಮ ಕಂಡು ಬಂದಿದೆ. ಈ ಖದೀಮರು, ಗೋವುಗಳನ್ನು ಕಳ್ಳತನ ಮಾಡಿ ಗೋ ಮಾಂಸ ಮಾರಾಟ ಮಾಡುತ್ತಿದ್ದರು. ರಾಶಿ ರಾಶಿ ಗೋವುಗಳ ಮಾರಾಣ ಹೋಮ ನಡೆಸಿ ಈ ದುರುಳರು ದಂದೆ ಮಾಡುತ್ತಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಕಳೆದ ನಾಲ್ಕು ದಿನಗಳ ಹಿಂದಷ್ಟೇ ಮಾಸೂರಿನಲ್ಲಿ ಅಕ್ರಮ ಗೋ ಮಾಂಸ ಮಾರಾಟ ಜಾಲ ಪತ್ತೆಯಾಗಿತ್ತು. ಇದೀಗ ಹಾನಗಲ್ ತಾಲೂಕಿನ ಶ್ರೀರಾಮ ತೀರ್ಥಹೊಸಕೊಪ್ಪದಲ್ಲಿ ಮತ್ತೊಂದು ಅಕ್ರಮ ಗೋ ಮಾಂಸದ ಅಡ್ಡೆ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಹಲವು ತಿಂಗಳಿಂದ ಗೋವುಗಳ ಕಳ್ಳತನ ಆಗುತ್ತ ಬಂದಿದೆ. ಇನ್ನೊಂದು ಕಡೆ ಮನೆ ಮುಂದೆ ಕಟ್ಟಿರುವ ಗೋವುಗಳ ಕಾಲುಗಳನ್ನ ಕಟ್ ಮಾಡಿ ನರ ರಾಕ್ಷಸರು ಹೋಗುತ್ತಿದ್ದಾರೆ. ಹೀಗಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹಿಂದು ಜಾಗರಣ ವೇದಿಕೆಯಿಂದ ಆಗ್ರಹ ಕೇಳಿ ಬಂದಿದೆ.
ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.