ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಮತ್ತು ಉದ್ಯಮವನ್ನು ಉತ್ತೇಜಿಸಲು ಸಹಕಾರ ಅಗತ್ಯ ಎಂದು ತಾ.ಪಂ ಇಒ ಬಸವರಾಜ ಬಡಿಗೇರ ಹೇಳಿದರು.
ಪಟ್ಟಣದ ಸಾನ್ವಿ ಮಾರ್ಟ್ನಲ್ಲಿ ಸಂಜೀವಿನಿ ಸ್ವ-ಸಹಾಯ ಸಂಘಗಳ ಸದಸ್ಯರು ತಯಾರಿಸಿರುವ ಉತ್ನನ್ನಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎನ್‌ಆರ್‌ಎಲ್‌ಎಂ ಸಂಜೀವಿನಿ ಒಕ್ಕೂಟ ಬಡ ಮಹಿಳೆಯ ಸ್ವಯಂ ಉದ್ಯೋಗ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಲು ದಾರಿ ಮಾಡಿಕೊಟ್ಟಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಂಜೀವಿನಿ ಮಹಿಳಾ ಉದ್ದಿಮೆದಾರರಿಂದ ಮಾರ್ಟ್ನಲ್ಲಿ ಅಗರಬತ್ತಿ, ಎಣಿಕೆ ಸಾಮಾಗ್ರಿಗಳು, ಪೇಪರ್ ಪ್ಲೇಟ್, ರೊಟ್ಟಿ, ಗಾಣದ ಎಣ್ಣೆ, ಶೇಂಗಾ, ಕುಸುಬಿ ಚಟ್ನಿ, ಮೂರ್ತಿಗಳು (ಗಿಫ್ಟ್) ಸೇರಿದಂತೆ ಇತರೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ.
ಈ ವೇಳೆ ಎನ್‌ಆರ್‌ಎಲ್ ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಗುರು ವೀರಾಪೂರು, ಮೇಲ್ವಿಚಾರಕ ವೀರೇಶ ಎಸ್.ಬಳಿಗಾರ, ತಾಲೂಕು ವ್ಯವಸ್ಥಾಪಕ ಅನಿಲಕುಮಾರ್, ಸಾನ್ವಿ ಮಾರ್ಟ್ ಅಂಗಡಿಯ ಹಾಗೂ ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳಾದ ಕವಿತಾ ರೋಣದ, ಸಮೀನಾ, ರೋಷನ್ ಬೇಗಂ, ಶಾಂತಾ ಕರಮುಡಿ, ಮಾಲಾ ಕಮ್ಮಾರ, ವಿದ್ಯಾ ರೊಳ್ಳಿ, ಸಂಘದ ಉದ್ಯಮಿ ಮಹಿಳೆಯರು ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಇದ್ದರು.