HomeEntertainment57ನೇ ವಯಸ್ಸಿಗೆ ತಂದೆ ಆದ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್ ಖಾನ್‌

57ನೇ ವಯಸ್ಸಿಗೆ ತಂದೆ ಆದ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್ ಖಾನ್‌

For Dai;y Updates Join Our whatsapp Group

Spread the love

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್​ಗೆ ಈಗಾಗಲೇ ವಯಸ್ಸಿಗೆ ಬಂದಿರೋ ಮಗನಿದ್ದಾನೆ. ಇದೀಗ ತಮ್ಮ 57ನೇ ವಯಸ್ಸಿನಲ್ಲಿ ಮತ್ತೊಂದು ಮಗುವಿನ ತಂದೆಯಾಗೋ ಖುಷಿಯನ್ನು ಅರ್ಬಾಜ್‌ ಖಾನ್‌ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಎರಡನೇ ಮದುವೆಯಾಗಿರೋ ಅರ್ಬಾಜ್‌ ಖಾನ್‌ ಇದೀಗ ತಂದೆಯಾಗ್ತಿರೋ ಸಂಭ್ರಮದಲ್ಲಿದ್ದಾರೆ.

ನಟ ಅರ್ಬಾಜ್ ಖಾನ್ ಅವರ ಎರಡನೇ ಪತ್ನಿ ಶೂರಾ ಖಾನ್ ಗರ್ಭಿಣಿ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ದಂಪತಿ ಅಧಿಕೃತವಾಗಿ ಮಾಹಿತಿ ನೀಡಿರಲಿಲ್ಲ. ಇದೀಗ ದಂಪತಿ ಪೋಷಕರಾಗುತ್ತಿರುವ ಸುದ್ದಿಯನ್ನು ಅಧಿಕೃತಗೊಳಿಸಿದ್ದಾರೆ.

ಅರ್ಬಾಜ್ ಖಾನ್ ‘ದೆಹಲಿ ಟೈಮ್ಸ್’ ಗೆ ನೀಡಿದ ಸಂದರ್ಶನದಲ್ಲಿ ಅವರು ಶೀಘ್ರದಲ್ಲೇ ತಂದೆಯಾಗಲಿರುವುದಾಗಿ ಹೇಳಿಕೊಂಡಿದ್ದಾರೆ. ‘ಮೊದಲ ಮಗುವಿನ ನಿರೀಕ್ಷೆಯಲ್ಲಿ ನೀವಿದ್ದೀರಂತೆ’ ಎಂದು ಶುರಾ ಹಾಗೂ ಅರ್ಬಾಜ್​ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅರ್ಬಾಜ್, ‘ಹೌದು ಹಾಗೊಂದು ಸುದ್ದಿ ಇದೆ. ನಾನು ಅದನ್ನು ತಳ್ಳಿ ಹಾಕುತ್ತಿಲ್ಲ. ನನ್ನ ಕುಟುಂಬಕ್ಕೆ ಈ ಬಗ್ಗೆ ಗೊತ್ತು. ಜನರಿಗೂ ಅದು ತಿಳಿದಿದೆ ಎಂದರೆ ನನಗೇನು ಸಮಸ್ಯೆ ಇಲ್ಲ. ನಮ್ಮ ಜೀವನದಲ್ಲಿ ಇದು ಖುಷಿಯ ವಿಚಾರ. ನಾವು ಎಗ್ಸೈಟ್ ಆಗಿದ್ದೇವೆ. ನಾವು ನಮ್ಮ ಜೀವನಕ್ಕೆ ಹೊಸ ಜೀವವನ್ನು ಕರೆದು ತರುತ್ತಿದ್ದೇವೆ’ ಎಂದಿದ್ದಾರೆ.

‘ನಿಮಗೆ ನರ್ವಸ್​ನೆಸ್ ಇದೆಯಾ’ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರ್ಬಾಜ್‌, ‘ಈ ಸಮಯಕ್ಕೆ ಎಲ್ಲರೂ ನರ್ವಸ್ ಆಗಿರುತ್ತಾರೆ. ಸ್ವಲ್ಪ ಸಮಯದ ನಂತರ ನಾನು ತಂದೆಯಾಗುತ್ತಿದ್ದೇನೆ. ಇದು ನನಗೆ ಮತ್ತೆ ಹೊಸ ಅನುಭವ. ನಾನು ಉತ್ಸುಕನಾಗಿದ್ದೇನೆ. ನಾನು ಸಂತೋಷವಾಗಿದ್ದೇನೆ. ಇದು ನನಗೆ ಹೊಸ ಜವಾಬ್ದಾರಿಯ ಭಾವನೆ ನೀಡಿದೆ’ ಎಂದು ಹೇಳಿದ್ದಾರೆ.

ಅರ್ಬಾಜ್ ಖಾನ್ ಮೊದಲು ಮಲೈಕಾ ಅರೋರಾ ಅವರನ್ನು ವಿವಾಹವಾಗಿದ್ದರು. ಹಲವಾರು ವರ್ಷಗಳ ನಂತರ, ಇಬ್ಬರೂ ವಿಚ್ಛೇದನ ಪಡೆದರು. ಈಗ ಅವರಿಗೆ 22 ವರ್ಷದ ಮಗ ಅರ್ಹಾನ್ ಖಾನ್ ಕೂಡ ಇದ್ದಾನೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!