ಸೌತ್ ಬ್ಯೂಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರವಾಗಿಯೇ ಹೆಚ್ಚು ಹೆಚ್ಚು ಸುದ್ದಿಯಾಗ್ತಿದ್ದಾರೆ. ನಾಗಚೈತನ್ಯ ಡಿವೋರ್ಸ್ ಬಳಿಕ ಸಿಂಗಲ್ ಆಗಿದ್ದ ನಟಿ ಇದೀಗ ನಿರ್ಮಾಪಕರ ಜೊತೆ ಆಗಾಗ ಕಾಣಿಸಿಕೊಳ್ತಿದ್ದಾರೆ. ಇಬ್ಬರು ಪದೇ ಪದೇ ಒಟ್ಟಿಗೆ ಕಾಣಿಸಿಕೊಳ್ತಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ನಟಿ ಸಮಂತಾ ನಿರ್ಮಾಪಕ ರಾಜ್ ನಿಡಿಮೋರು ಜೊತೆ ಕಾಣಿಸಿಕೊಂಡಿದ್ದು ಇಬ್ಬರ ಸಂಬಂಧದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಮಂತಾ ಹಾಗೂ ನಿರ್ಮಾಪಕ ರಾಜ್ ನಿಡಿಮೋರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಮತ್ತೆ ಮತ್ತೆ ಒಟ್ಟಿಗೆ ಕಾಣಿಸಿಕೊಳ್ತಿರೋದು ಡೇಟಿಂಗ್ ವದಂತಿಗೆ ಪುಷ್ಠಿ ಸಿಕ್ಕಂತಾಗಿದೆ.
ಇತ್ತೀಚೆಗೆ ಸಮಂತಾ ಮಾಜಿ ಪತಿ ನಾಗಚೈತನ್ಯ ನಟಿ ಶೋಭಿತಾ ಅವರೊಂದಿಗೆ ಮದುವೆಯಾಗಿದ್ದರೆ. ನಾಗಚೈತನ್ಯರಿಂದ ಡಿವೋರ್ಸ್ ಪಡೆದ ಬಳಿಕ ಸಿನಿಮಾದ ಕೆಲಸಗಳಲ್ಲಿ ಫುಲ್ ಬ್ಯುಸಿಯಾಗಿದ್ದ ನಟಿ ಇದೀಗ ನಿರ್ಮಾಪಕರ ಜೊತೆ ಓಡಾಡುತ್ತಿದ್ದಾರೆ. ಇಬ್ಬರ ನಡುವೆ ಲವ್ ಶುರುವಾಗಿದ್ಯಾ? ಮದುವೆ ಆಗ್ತೀದ್ದಾರ ಎಂಬ ಬಗ್ಗೆ ಇಬ್ಬರು ಬಾಯಿ ಬಿಟ್ಟಿಲ್ಲ.
ಅಂದ ಹಾಗೆ ನಿರ್ಮಾಪಕ ರಾಜ್ ನಿಡಿಮೋರು ಅವರಿಗೆ ಈಗಾಗಲೇ ಶ್ಯಾಮಲಿ ಡೇ ಎಂಬುವವರೊಂದಿಗೆ ಮದುವೆ ಆಗಿದೆ. ಮೊದಲ ಪತ್ನಿಗೆ ಡಿವೋರ್ಸ್ ನೀಡಿ ಸಮಂತಾ ಜೊತೆ ರಾಜ್ 2ನೇ ಮದುವೆ ಆಗುವ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.