ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ‘ಅವನೇ ನನ್ನ ಗಂಡ’, ‘ನನಗೂ ಹೆಂಡತಿ ಬೇಕು’, ‘ತುಂಬಿದ ಮನೆ’, ‘ರಾಜ ಕೆಂಪು ರೊಜ’ ಇನ್ನೂ ಕೆಲವು ಸಿನಿಮಾಗಳಲ್ಲಿ ನಿರ್ದೇಶಿಸಿದ್ದ ಎಸ್ ಉಮೇಶ್ ಅವರು ಇಂದು ವಿಧಿವಶರಾಗಿದ್ದಾರೆ. ಎಸ್ ಉಮೇಶ್ ಅವರ ಅಂತ್ಯಕ್ರಿಯೆಯನ್ನು ಇಂದು ಬನಶಂಕರಿಯ ಚಿತಾಗಾರದಲ್ಲಿ ನಡೆಸಲಾಗುತ್ತದೆ ಎಂದು ಕುಟುಂಬದವರು ಮಾಹಿತಿ ಹಂಚಿಕೊಂಡಿದ್ದಾರೆ.
ಎಸ್ ಉಮೇಶ್ ಅವರು ಕಳೆದ ಕೆಲ ವರ್ಷಗಳಿಂದಲೂ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು. ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದ ಎಸ್ ಉಮೇಶ್ ಅವರು 2021 ರಲ್ಲಿ ತಮಗೆ ಆರ್ಥಿಕ ಸಹಾಯದ ಅವಶ್ಯಕತೆ ಇದೆಯೆಂದು ಮನವಿ ಮಾಡಿದ್ದರು.
ವಿಡಿಯೋ ಮೂಲಕ ತಮ್ಮ ನೋವನ್ನು ಹೇಳಿಕೊಂಡಿದ್ದ ಉಮೇಶ್, ಸಹಾಯಕ್ಕಾಗಿ ಎಲ್ಲರ ಬಳಿ ಮನವಿ ಮಾಡಿಕೊಂಡಿದ್ದರು. ಆ ಸಮಯದಲ್ಲಿ ಲಹರಿ ಸಂಸ್ಥೆ ಎಸ್ ಉಮೇಶ್ ಅವರ ಚಿಕಿತ್ಸೆಗೆ ನೆರವಾಗಿತ್ತು. ಮನೋಹರ್ ನಾಯ್ಡು, ಲಹರಿ ವೇಣು ಅವರುಗಳು ಉಮೇಶ್ ಅವರಿಗೆ ಒಂದು ಲಕ್ಷ ರೂಪಾಯಿ ಹಣ ನೀಡಿದ್ದರು.