ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಮತ್ತು ಬೆಳಗಾವಿ ಜಿಲ್ಲಾ ಘಟಕ ಕೊಡಮಾಡುವ ಪ್ರತಿಷ್ಠಿತ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿಗೆ ರಾಜ್ಯದ 31 ಜಿಲ್ಲೆಯ 31 ಜನರಿಗೆ ಮತ್ತು ಒಂದು ಸಂಘ ಪ್ರಶಸ್ತಿಯನ್ನು ಘೋಷಣೆ ಮಾಡಿ ರಾಜ್ಯ ಅಧ್ಯಕ್ಷ ಎಸ್.ಬಾಲಾಜಿ ಆದೇಶಿಸಿದ್ದಾರೆ.
ಕಲಬುರಗಿ ವಿಭಾಗದ ಕೊಪ್ಪಳದಿಂದ ಶಿಕ್ಷಣ ಕ್ಷೇತ್ರ ಮತ್ತು ಸಮಾಜ ಸೇವೆಗೆ ಸಂಗೀತಾ ಬಿ.ಕಲ್ಲೇಶ ಮೆಣೆದಾಳ, ವಿಜಯನಗರ ಜಿಲ್ಲೆಯಿಂದ ಅಂತಾರಾಷ್ಟ್ರೀಯ ಭರತನಾಟ್ಯ ಕಲಾವಿದೆ ಪಿ.ಅಂಜು, ಬಳ್ಳಾರಿ ಜಿಲ್ಲೆಯಿಂದ ಯುವ ಸಂಘಟನೆ ಮತ್ತು ಸಮಾಜ ಸೇವೆಗೆ ಹನುಮಯ್ಯ ದೊಡ್ಡಬಸಪ್ಪ ಜಿ., ಕಲಬುರಗಿಯಿಂದ ಚನ್ನವೀರ್ ಬಿ.ಕಣ್ಣಿಗಿ, ಬೀದರ ಜಿಲ್ಲೆಯ ರಾಜಕುಮಾರ ಮೋರೆ, ಯಾದಗಿರಿ ಜಿಲ್ಲೆಯ ನಿಂಗಣ್ಣ ದೇವಪ್ಪ ಲಾಠಿ ಮತ್ತು ರಾಯಚೂರ ಜಿಲ್ಲೆಯ ಮಹೇಶ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರಿನ ಇಟ್ಟಪ್ಪ ದೇವರ ರಂಗ ವೇದಿಕೆಯಲ್ಲಿ ಜ.27ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಕಲಬುರಗಿ ವಿಭಾಗೀಯ ಸಂಚಾಲಕ ಮಂಜುನಾಥ ಜಿ.ಗೊಂಡಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.