ಸಂಜೀವಿನಿ ಉತ್ಪನ್ನ ಅರ್ಚಿಸ್ ಮಾರ್ಟ್ನಲ್ಲಿ ಲಭ್ಯ

0
Sanjeevini product available at Archis Mart
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗ್ರಾಮೀಣ ಪ್ರದೇಶಗಳ ಸಂಜೀವಿನಿ ಮಹಿಳಾ ಗುಂಪಿನ ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಉತ್ತೇಜನ ಕಲ್ಪಿಸುವ ಉದ್ದೇಶದಿಂದ ನಗರದ ಅರ್ಚಿಸ್ ಮಾರ್ಟ್ನಲ್ಲಿ ಅವಕಾಶ ಕಲ್ಪಿಸಿರುವುದು ಮಹಿಳಾ ಸಂಘದವರಿಗೆ ಅನಕೂಲವಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅವರು ಹೇಳಿದರು.

Advertisement

ನಗರದ ಅಚಿರ್ಸ್ ಮಾರ್ಟ್ನಲ್ಲಿ ತಾಲೂಕಾ ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕ ಮತ್ತು ಅರ್ಚಿಸ್ ಮಾರ್ಟ್ ಇವರ ಸಹಯೋಗದಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರು ತಯಾರಿಸಿರುವ ಉತ್ನನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ, ಗ್ರಾಹಕರಿಗೆ ಉತ್ಪನ್ನಗಳನ್ನು ಪರಿಚಯಿಸುವುದರೊಂದಿಗೆ ಆದಾಯ ಗಳಿಸಿ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಮುಂದೆ ಬರಬೇಕು ಎಂದರು.

ತಾ.ಪಂ ಹಿರಿಯ ಅಧಿಕಾರಿ ಶಿವಕುಮಾರ ವಾಲಿ ಮಾತನಾಡಿ, ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರ್ಟ್ನವರು ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ಮಹಿಳಾ ಸಂಘದವರು ಆರ್ಥಿಕವಾಗಿ ಮುಂದೆ ಬರಲು ಸಹಾಯಕಾರಿಯಾಗಿದೆ ಎಂದರು.

ಈ ಸಮಯದಲ್ಲಿ ಅರ್ಚಿಸ್ ಮಾರ್ಟ್ ಮಾಲೀಕರಾದ ರವಿ ಎಂ.ಶಿಗ್ಲಿ, ಸಂಜೀವಿನಿ ಯೋಜನೆ ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕ ಮಾರುತಿ ಕೊಡ್ಲಿ, ತಾಲೂಕಾ ವ್ಯವಸ್ಥಾಪಕ ವಿರೂಪಾಕ್ಷ ಕೊನ್ನಣವರ, ವಲಯ ಮೇಲ್ವಿಚಾರಕರಾದ ಬಸವರಾಜ ಗುತ್ತೆದ್ದಾರ, ಪಿ.ಎಂ. ಪಾಟೀಲ, ಸಂಜೀವಿನಿ ಯೋಜನೆ ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿ ಮತ್ತು ಸ್ವ-ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here