ಸಂಸ್ಕೃತ ಸಂಭಾಷಣಾ ಶಿಬಿರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಫೆಬ್ರವರಿ 27ರಿಂದ ಮಾರ್ಚ್ 9ರವರೆಗೆ ಕುರ್ತಕೋಟಿಯ ಸಂಸ್ಕೃತ ಬಾಲ ಕೇಂದ್ರದಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರವನ್ನು ಆಯೋಜಿಸಲಾಗಿದೆ. ಕುರ್ತಕೋಟಿಯ ಮುಖಂಡ ಅಪ್ಪಣ್ಣ ಅಮರಪ್ಪ ಇನಾಮತಿ ಅವರು ಆಸಕ್ತಿ ವಹಿಸಿ ಸಂಸ್ಕತ ಭಾರತಿ ತಂಡದ ಕಾರ್ಯಕ್ಕೆ ಸಹಕರಿಸಿದ್ದಾರೆ.

Advertisement

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಕೃತ ಭಾರತಿ ಜಿಲ್ಲಾ ಸಂಯೋಜಕ ಎಸ್.ಎನ್. ಶಿಂಪಿಗೇರ್ ಅತಿಥಿಗಳಾಗಿ ಪಾಲ್ಗೊಂಡರೆ, ಕಳಕಪ್ಪ ಕುರ್ತಕೋಟಿ ಅಧ್ಯಕ್ಷತೆ ವಹಿಸಿದ್ದರು. ಗದಗ ಪಟ್ಟಣ ಸಂಯೋಜಕ ಮೌನೇಶ ಭಜಂತ್ರಿ, ಗದಗ ಸಂಸ್ಕೃತ ಶಿಕ್ಷಕರ ಸಂಘಟನೆಯ ಅಧ್ಯಕ್ಷ ಶಿವಚಲಕುಮಾರ ಸಾಲಿಮಠ, ಶಿಕ್ಷಕಿ ರೇಖಾ ಮಡಿವಾಳರ ಅವರು ತರಬೇತಿಯನ್ನು ಪ್ರಾರಂಭಿಸಿದರು.


Spread the love

LEAVE A REPLY

Please enter your comment!
Please enter your name here