ಧಾರವಾಡ: ಧಾರವಾಡದ ಗಣೇಶನಗರದ ಬಳಿ ರೈಲ್ವೆ ಸೇತುವೆ ನಿರ್ಮಾಣವಾಗುತ್ತಿದ್ದು, ಇಲ್ಲಿ ಮನೆ ಕಳೆದುಕೊಂಡಿರುವ ಸುಮಾರು 30 ಕುಟುಂಬಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿದ್ದಾರೆ.
Advertisement
ರೈಲ್ವೆ ಸೇತುವೆ ನಿರ್ಮಾಣಕ್ಕಾಗಿ ಅಲ್ಲಿನ ಕುಟುಂಬಗಳು ತಮ್ಮ ಮನೆ ಕಳೆದುಕೊಂಡಿವೆ. ಹೀಗಾಗಿ ಅವರಿಗೆ ಸಂತೋಷ ಲಾಡ್ ಅವರು ವೈಯಕ್ತಿಕವಾಗಿ 30 ಕುಟುಂಬದ ಪ್ರತಿಯೊಬ್ಬರಿಗೂ 10 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ.
ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಈ ಆರ್ಥಿಕ ನೆರವು ನೀಡಲಾಗಿದ್ದು, ಬೇರೆ ಕಡೆ ಮನೆ ಬಾಡಿಗೆ ಹಿಡಿದುಕೊಳ್ಳಲು ಈ ಸಹಾಯ ಮಾಡಲಾಗಿದೆ. ಧಾರವಾಡದ ಪ್ರವಾಸಿ ಮಂದಿರದಲ್ಲಿ ಕುಟುಂಬಸ್ಥರಿಗೆ ಈ ಪರಿಹಾರ ನೀಡಲಾಯಿತು.