ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಹಾಗೂ ಲಯನ್ ಲೇಡೀಸ್ ಕ್ಲಬ್ ಸಹಯೋಗದಲ್ಲಿ ನಗರದ ಲಯನ್ಸ್ ಸ್ಕೂಲ್ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಸಾಥ್ ನೀಡಿದರು. ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ ಸಂದರ್ಭೋಚಿತವಾಗಿ ಮಾತನಾಡಿ, ಪರಿಸರ ಸಮತೋಲನ ಕಾಯ್ದುಕೊಳ್ಳಲು ಗಿಡ-ಮರಗಳ ಅವಶ್ಯಕತೆಯನ್ನು ವಿವರಿಸಿದರು.
ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಕೋಶಾಧ್ಯಕ್ಷ ರೇಣುಕಪ್ರಸಾದ ಹಿರೇಮಠ, ಲಯನ್ ಲೇಡೀಸ್ ಕ್ಲಬ್ ಅಧ್ಯಕ್ಷೆ ಪೂಜಾ ಪಾಟೀಲ, ಕಾರ್ಯದರ್ಶಿ ಸುರೇಖಾ ಮಲ್ಲಾಡದ, ಕೋಶಾಧ್ಯಕ್ಷೆ ಸ್ನೇಹಾ ಹಿರೇಮಠ ಸೇರಿದಂತೆ ಡಾ. ಜಗದೀಶ ಶಿರೋಳ, ಅಶ್ವಥ್ ಸುಲಾಖೆ, ಜೆ.ಡಿ. ಉತ್ತರಕರ, ರಮೇಶ ಶಿಗ್ಲಿ, ಪ್ರವೀಣ ವಾರಕರ, ನಿತೀಶ್ ಸಾಲಿ, ಅರವಿಂದ ಪಟೇಲ್, ರಘು ಮೇಹರವಾಡೆ, ಎಸ್.ಡಿ. ಪಾಟೀಲ, ವೀರೇಶ ಪಟ್ಟಣಶೆಟ್ಟಿ ಮುಂತಾದವರಿದ್ದರು.