ಕಾಂತಾರ ಸಿನಿಮಾದ ಬಳಿಕ ನಟಿ ಸಪ್ತಮಿ ಗೌಡ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ಕಾಂತಾರ ಚಿತ್ರದಿಂದ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಟಿ ಈಗಾಲಗೇ ಬಾಲಿವುಡ್ ಚಿತ್ರರಂಗದಲ್ಲೂ ನಟಿಸಿ ಬಂದಿದ್ದಾರೆ. ಇದೀಗ ತೆಲುಗು ಚಿತ್ರರಂಗಕ್ಕೆ ಸಪ್ತಮಿ ಕಾಲಿಟ್ಟಿದ್ದು ಮೊದಲ ಚಿತ್ರದಲ್ಲೇ ಪವರ್ ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಸಪ್ತಮಿ ನಟನೆಯ ತೆಲುಗು ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.
ನಿತಿನ್ ನಟನೆಯ ‘ತಮ್ಮುಡು’ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದು ಇತ್ತೀಚೆಗೆ ತಮ್ಮುಡು ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ‘ತಮ್ಮುಡು’ ಸಿನಿಮಾನಲ್ಲಿ ಸಪ್ತಮಿ ಗೌಡ, ಬುಡಕಟ್ಟು ಯುವತಿಯ ಪಾತ್ರದಲ್ಲಿ ನಟಿಸಿದ್ದು, ಊರಿನ ಜನರನ್ನು ಕಾಪಾಡಲು ನಾಯಕನಿಗೆ ನೆರವಾಗುವ ಪಾತ್ರದಂತೆ ಟ್ರೈಲರ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ತಮ್ಮುಡು ಸಿನಿಮಾದಲ್ಲಿ ಇಬ್ಬರು ನಟಿಯರಿದ್ದು ಇಬ್ಬರು ಕೂಡ ಕನ್ನಡದ ನಟಿಯರೇ ಅನ್ನೋದು ವಿಶೇಷ. ಸಪ್ತಮಿ ಗೌಡ ಮಾತ್ರವೇ ಅಲ್ಲದೆ, ಕೊಡಗಿನ ಬೆಡಗಿ ವರ್ಷಾ ಬೊಲ್ಲಮ್ಮ ಸಹ ನಟಿಸಿದ್ದಾರೆ. ಸಪ್ತಮಿ ಹಾಗೂ ವರ್ಷಾ ಇಬ್ಬರೂ ಈ ಸಿನಿಮಾದಲ್ಲಿ ನಾಯಕಿಯರಾಗಿ ಮಿಂಚಿದ್ದಾರೆ.
ವೇಣು ಶ್ರೀರಾಮ್ ಅವರು ‘ತಮ್ಮುಡು’ ಸಿನಿಮಾ ನಿರ್ದೇಶನ ಮಾಡಿದ್ದು, ದಿಲ್ ರಾಜು, ಸಿರೀಶ್ ಮತ್ತು ರವಿ ಸುರ್ನಿರೆಡ್ಡಿ ಬಂಡವಾಳ ಹೂಡಿದ್ದಾರೆ. ಜುಲೈ 4 ರಂದು ಸಿನಿಮಾ ರಿಲೀಸ್ ಆಗಲಿದೆ.