ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಸೀರೆಕಳ್ಳಿಯರು ಫುಲ್ ಆ್ಯಕ್ಟೀವ್ ಆಗಿದ್ದು, ಸ್ವಲ್ಪ ಯಾಮಾರಿದ್ರೆ ದುಬಾರಿ ಸೀರೆಗಳು ಮಂಗಮಾಯವಾಗಿಬಿಡುತ್ತೆ.
ನಗರದ ಪ್ರತಿಷ್ಟಿತ ಸೀರೆ ಶೋರೂಂಗಳಲ್ಲಿ ಕೈಚಳಕ ತೋರಿದ್ದ ನಾಲ್ವರು ಸೀರೆ ಕಳ್ಳಿಯರನ್ನು ಜೆ ಪಿ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪೊನ್ನೂರು ಮಲ್ಲಿ, ವೆಂಕಟೇಶ್ವರಮ್ಮ, ಮಧುಗನಿ ಜಾನಕಿ ಹಾಗೂ ಮೇಧ ರಜನಿ ಬಂಧಿತ ಮಹಿಳೆಯರು.
ಈ ಗ್ಯಾಂಗ್ ಆಗಾಗ ಬೆಂಗಳೂರು ಸೇರಿ ಬೇರೆ ಬೇರೆ ನಗರಗಳಿಗೆ ಸೀರೆ ಖರೀದಿಗೆ ಶಾಪಿಂಗ್ ಹೋಗುತ್ತಿದ್ದರು. ಹೆಸರಾಂತ ಬಟ್ಟೆ ಅಂಗಡಿಗಳನ್ನೆ ಸೆಲೆಕ್ಟ್ ಮಾಡಿಕೊಂಡು ಶಾಪಿಂಗ್ ಮಾಡುತ್ತಿದ್ದ ಈ ಮಹಿಳೆಯರು, ದುಬಾರಿ ಬೆಲೆಯ ಸೀರೆಗಳನ್ನ ತೆಗೆಸಿ ವ್ಯಾಪಾರ ಮಾಡುವ ಸೋಗಿನಲ್ಲಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು, ಸೈಲೆಂಟಾಗಿ ಒಂದೊಂದೆ ಸ್ಯಾರಿಯನ್ನ ಬಟ್ಟೆ ಒಳಗೆ ಅಡಗಿಸಿಟ್ಟುಕೊಂಡು ಅಲ್ಲಿಂದ ಒಬ್ಬರ ಹಿಂದೆ ಒಬ್ಬರು ಪರಾರಿ ಆಗುತ್ತಿದ್ದರು.
ಇದೇ ರೀತಿ ಜೆಪಿ ನಗರದ ಪ್ರತಿಷ್ಟಿತ ಬಟ್ಟೆ ಅಂಗಡಿಗೆ ಶಾಪಿಂಗ್ ಹೋಗಿದ್ದ ಈ ಮಹಿಳೆಯರು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸೀರೆಗಳನ್ನ ಕದ್ದು ಬಂದಿದ್ದರಂತೆ. ಈ ಬಗ್ಗೆ ಜೆ ಪಿ ನಗರ ಪೊಲೀಸರು ಕೇಸ್ ದಾಖಲಿಸಿ ಈ ನಾಲ್ವರು ಸೀರೆ ಕಳ್ಳಿಯರನ್ನ ಬಂಧಿಸಿದ್ದಾರೆ. ಇನ್ನು ಬಂಧಿತ ಮಹಿಳೆಯರು ಕಡಿಮೆ ಬೆಲೆಯ ಸೀರೆಗಳನ್ನ ಮುಟ್ಟುತ್ತಿರಲಿಲ್ಲ.
ತಾವು ಶ್ರೀಮಂತ ವ್ಯಕ್ತಿಗಳು ಎಂದು ಪೋಸ್ ಕೊಟ್ಕೊಂಡು ಲಕ್ಷ ಲಕ್ಷ ಬೆಲೆಬಾಳುವ ಸೀರೆಗಳನ್ನೆ ನೋಡಿ ಕದಿಯುತ್ತಿದ್ದರಂತೆ. ಸದ್ಯ ಬಂಧಿತ ನಾಲ್ವರು ಮಹಿಳೆಯರಿಂದ ಸುಮಾರು 17.5 ಲಕ್ಷ ಮೌಲ್ಯದ 38 ಸೀರೆಗಳನ್ನ ವಶಕ್ಕೆ ಪಡೆಯಲಾಗಿದೆ.