ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಾಡಳಿತ ಮತ್ತು ತಾಲೂಕಾ ಕುಂಬಾರ ಕ್ಷೇಮಾಭಿವೃದ್ಧಿ ವತಿಯಿಂದ ಶಿರಹಟ್ಟಿಯ ತಹಸೀಲ್ದಾರ ಕಚೇರಿಯಲ್ಲಿ ಗುರುವಾರ ತ್ರಿಪದಿ ಕವಿ ಸರ್ವಜ್ಞರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ನೀಲಪ್ಪ ಚಕ್ರಸಾಲಿ ಮತ್ತು ಮುತ್ತು ಚಕ್ರಸಾಲಿ ಮಾತನಾಡಿ, ಸರ್ವಜ್ಞ ಅವರು ಮೂರು ಸಾಲಿನಲ್ಲಿ ಮಹಾಕಾವ್ಯಗಳ, ಮಹಾಗ್ರಂಥಗಳ ಸಾರವನ್ನು ಹಿಡಿದಿಟ್ಟಿದ್ದಾರೆ. ಈ ಮಹಾಕವಿಯು ಜಗತ್ತಿನ ಜ್ಞಾನ, ವೈಚಾರಿಕತೆ, ಮಾನವೀಯ ಮೌಲ್ಯಗಳನ್ನು ತುಂಬಿಟ್ಟಿದ್ದಾರೆ. ಸರ್ವಜ್ಞನು ಚಿತ್ರ ತ್ರಿಪದಿ, ವಿಚಿತ್ರ ತ್ರಿಪದಿ, ಚಿತ್ರಲತೆ ತ್ರಿಪದಿ ಎಂಬ ಮೂರು ಪ್ರಕಾರದಲ್ಲಿ ತತ್ವ ಬೋಧಿಸಿ ಸಮಾಜದಲ್ಲಿರುವ ಅನೇಕ ಅಂಕು-ಡೊAಕುಗಳನ್ನು ತಿದ್ದಲು ಪ್ರಯತ್ನ ಮಾಡಿದ ಮಹಾನ್ ದಾರ್ಶನಿಕರಾಗಿದ್ದಾರೆ ಎಂದರು.
ಮಾಧ್ಯಮಿಕ ಶಾಲಾ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ, ಎಚ್.ಎಂ. ದೇವಗಿರಿ, ಕೆ.ಎ. ಬಳಿಗಾರ, ಶಿವಪ್ಪ ಕುಂಬಾರ, ಮಂಜುನಾಥ ಕುಂಬಾರ, ಬಸಪ್ಪ ಕುಂಬಾರ, ಹನಮಂತಪ್ಪ ಕುಂಬಾರ, ಮಂಜುನಾಥ ಚಕ್ರಸಾಲಿ, ಸಂಗಪ್ಪ ಚಕ್ರಸಾಲಿ, ಬಸವರಾಜ ಚಕ್ರಸಾಲಿ, ಸತೀಶ ಚಕ್ರಸಾಲಿ, ಪ್ರಮೋದ ಕುಂಬಾರ, ಈರಣ್ಣ ಚಕ್ರಸಾಲಿ, ಬಸವಣ್ಣೆಪ್ಪ ಚಕ್ರಸಾಲಿ, ಅನ್ನಪೂರ್ಣ ಕುಂಬಾರ, ಲಕ್ಷ್ಮೀ ಕುಂಬಾರ, ಚನ್ನಪ್ಪ ಕುಂಬಾರ, ಸುರೇಶ ಅಕ್ಕಿ, ನಟರಾಜ ರಾನಡೆ, ಶಿವಲಿಂಗ ಅಡ್ರಕಟ್ಟಿ, ಬಸವರಾಜ ರಾಜಮನಿ, ಈರಣ್ಣ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.