ದಾವಣಗೆರೆ:- ಇಲ್ಲಿನ ಮುಖ್ಯ ರಸ್ತೆಯಲ್ಲಿರುವ SBI ಬ್ಯಾಂಕ್ ನಲ್ಲಿ ರಾಬರಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐನೂರಕ್ಕೂ ಹೆಚ್ಚು ಗ್ರಾಹಕರ ಆಭರಣಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಬಂಗಾರದ ಒಡವೆಗಳನ್ನು ಅಡವಿಟ್ಟು ಸಾಲ ಪಡೆದಿದ್ದ ಐನೂರಕ್ಕೂ ಅಧಿಕ ಗ್ರಾಹಕರ ಒಡವೆಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಇನ್ನೂ ಐನೂರಕ್ಕೂ ಅಧಿಕ ಗ್ರಾಹಕರ ದಾಖಲೆ ಇದ್ದು, ಒಟ್ಟು ಮೊತ್ತದ ಮಾಹಿತಿಯನ್ನು ಕಂಪ್ಲೀಟ್ ರಿಪೋರ್ಟ ಅನ್ನು ಬ್ಯಾಂಕ್ ಸಿಬ್ಬಂದಿ ತಾಳೆ ಹಾಕುತ್ತಿದೆ. ಘಟನೆ ಬಗ್ಗೆ ಬ್ಯಾಂಕ್ ಸಿಬ್ಬಂದಿ ಹೇಳಿದ ನಂತರ ಪೂರ್ಣ ಮಾಹಿತಿ ನೀಡುವುದಾಗಿ ಎಸ್ಪಿ ಉಮಾ ಪ್ರಶಾಂತ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್, ಮಾಹಿತಿ ಬಂದ ಮೇಲೆ ನಿಖರವಾಗಿ ಒಟ್ಟು ಮೌಲ್ಯದ ಕುರಿತು ಹೇಳಲಾಗುವುದು. ಬ್ಯಾಂಕ್ ಕಳ್ಳತನ ಪ್ರಕರಣ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಮ್ಯಾನೇಜರ್ ಬಾಗಿಲು ತೆಗೆದಾಗ ಕಳ್ಳತನ ಆಗಿದ್ದು ಗೊತ್ತಾಗಿದೆ. ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗ್ಯಾಸ್ ಕಟರ್ ಮೂಲಕ ಬ್ಯಾಂಕ್ ಬಲಭಾಗದಲ್ಲಿನ ಕಿಟಕಿ ಸರಳು ಕಟ್ಟ್ ಮಾಡಿದ್ದಾರೆ.
ಒಳನುಗ್ಗಿದ ಕಳ್ಳರು ಬಂಗಾರದ ಆಭರಣ ಕದ್ದು ಹೋಗಿದ್ದಾರೆ. ಲಾಕರ್ ಕಟ್ ಮಾಡಿ ಬಂಗಾರದ ಆಭರಣ ಕಳ್ಳತನ ಮಾಡಿದ್ದು, ಸಿಸಿ ಕ್ಯಾಮೆರಾ ಡಿವೈಡರ್ ಕಟ್ ಮಾಡಿ ಕೃತ್ಯ ಎಸಗಿದ್ದಾರೆ. ತನಿಖೆ ನಂತರ ಸತ್ಯ ಹೊರ ಬರಲಿದೆ ಎಂದರು.